ಶಾಂತಲಾ ಭಂಡಿ
ಎಷ್ಟು ಹೊತ್ತಿಗೆ ಹೊರಡುವೆನೋ ಗೊತ್ತಿಲ್ಲ
ಟಿಕೆಟ್ ಕೊಟ್ಟವನಿಗೂ ಗೊತ್ತಿಲ್ಲ
ಹೊರಡುವ ಸಮಯ ನಿಗಧಿಯಾಗಬೇಕಷ್ಟೇ
ಟ್ರೇನಿಗೂ ನನಗೂ
ಬೆಳಗಿನ ಬಿಸಿಕಾಫಿ
ಸಂಜೆತನಕ ಇರಬೇಕೆಂದರೆ…
ಸುಮ್ಮನೆ ತಮಾಷೆ ಬೇಡ
ಆರಿದ್ದು ಕಾಫಿಯಲ್ಲ ಕೋಲ್ಡ್ ಕಾಫಿ
ಕುಡಿ ಬೇಗ ಟ್ರೇನ್ ಎಷ್ಟೊತ್ತಿಗೆ ಹೊರಡುವುದೋ ಗೊತ್ತಿಲ್ಲ
ಕಪ್ಪುಬಿಳುಪಿನ ಬೋರ್ಡು
ಟ್ರೇನಿಗೆ ಸೂಟಾಗುವುದಿಲ್ಲ
ಟ್ರೇನಿಗೂ ಬೋರ್ಡಿಗೂ ಸೂಟಾಗಬೇಕಿಲ್ಲ
ಹೊಸಬಣ್ಣ ಬಳಿಯಬೇಕು
ಬಿಡಿಸಿಟ್ಟ ಬೋರ್ಡಿಗೆ ಬಣ್ಣ ಬಳಿಯುವುದು ಹೇಗೆ?
ಬೋರ್ಡೇ ಟ್ರೇನಲ್ಲ ನೋಡು
ಟ್ರೇನಿನ ಬೋರ್ಡು
ಬಣ್ಣವಾಗಿದ್ದರೆ ಮಾರ್ಕೆಟ್ಟು
ಕಾಡಿಗೆ ಹೋಗುವ ಹಾದಿ
ಸಂತೆಯೊಳಗೆ ಸಿಗುತ್ತದೆಯೇ?
ತಲೆಬಿಸಿಯಿಲ್ಲ
ಕೊಂಡ ಟಿಕೆಟ್ ಓಪನ್ನು
ಸಮಯ ಇನ್ಯಾವುದೋ ಒಂದು
ಹೊರಟಾದ ಮೇಲೆಯೇ ಗೊತ್ತು
ಯಾವಾಗ ಹೊರಡುತ್ತೇವೋ ಎಂದು
ಸಮಯ ತನ್ನಷ್ಟಕ್ಕೆ ನಿಗಧಿಯಾಗುತ್ತದೆ
ಟ್ರೇನು ಹೊರಡುತ್ತದೆ
ಟಿಕೆಟ್ಟಿನ ಬೆಲೆ ಕೊಂಡವರಿಗೆ ಮಾತ್ರ
ಕೊಟ್ಟವರಿಗಲ್ಲ
ಹೊರಡುವ ಮುನ್ನ ಯಾರೂ ಸೀಟಿ ಊದುವುದಿಲ್ಲ








‘ಟಿಕೆಟ್ಟಿನ ಬೆಲೆ ಕೊಂಡವರಿಗೆ ಮಾತ್ರ
ಕೊಟ್ಟವರಿಗಲ್ಲ
ಹೊರಡುವ ಮುನ್ನ ಯಾರೂ ಸೀಟಿ ಊದುವುದಿಲ್ಲ’ – ಹಲವಾರು ಪಯಣಗಳು ಮೌನದಲ್ಲೇ ಶುರುವಾಗುತ್ತವೆ ಆದರೆ ತಿಳಿಯುತ್ತದೆ, ಆದರೆ ಮೌನದಲ್ಲೇ ಮುಗಿವ ಪಯಣಗಳು ತಿಳಿಯುವುದೇ ಇಲ್ಲ… ಒಳ್ಳೆಯ ಕವನ, ಪ್ರಯಾಣದ ಅವಸರವನ್ನು ಸೂಚಿಸುವ ಪದಗಳ ಬ೦ಧ ಸು೦ದರ…
nice one
ಕೊಟ್ಟವರಿಗಲ್ಲ
ಹೊರಡುವ ಮುನ್ನ ಯಾರೂ ಸೀಟಿ ಊದುವುದಿಲ್ಲ – This and the whole poem implies you are talking about death!. Nobody knows when it happens, yet all are sure of its occurrance!.
ಹಳೇ ತುಕ್ಕು ಹಿಡಿದ ಬೋರ್ಡು. ಎಲ್ಲಿ ಸಿಗ್ತು ಸಾರ್? 🙂
ಅವಧಿಗೆ ಧನ್ಯವಾದ ಹಳೇ ಬೋರ್ಡನ್ನ ಹಾಕಿಕೊಂಡಿದ್ದಕ್ಕೆ.
ಕಾಮೆಂಟುಗಳಿಗೂ ಧನ್ಯವಾದ.
ವಂದನೆಗಳೊಂದಿಗೆ,
ಪ್ರೀತಿಯಿಂದ,
ಶಾಂತಲಾ ಭಂಡಿ