
ವಿ ಹರಿನಾಥ ಬಾಬು ಸಿರುಗುಪ್ಪ
1)
ಈ ಮುಂಜಾನೆಯ
ಉದ್ದನೆಯ ನೆರಳು
ನಕ್ಕಂತೆ ಬುದ್ಧ
2)
ಕಣ್ಣ ಬೆಳಕು
ತಪೋ ನಿರತ ಬುದ್ಧ
ಸೂರ್ಯ ಮೂಡಿದ
3)
ಬೆತ್ತಲೆ ನಿಂತು
ಬೆಳಕ ತಬ್ಬಿಕೊಂಡೆ
ನಾನೊಬ್ಬ ಬುದ್ಧ

4)
ನೆರಳಿನಂತೆ
ಬುದ್ಧ ಹಿಂಬಾಲಿಸಿದ
ಎಲ್ಲೆಲ್ಲೂ ಸೂರ್ಯ
5)
ನಿನ್ನ ಧ್ಯಾನದಿ
ಎಲ್ಲ ಬಿಟ್ಟು ನಡೆದೆ
ಅಲ್ಲಮನಾದೆ
6)
ನದಿಯ ಹಾಡು
ಸಾಗರವ ಸೇರಿತು
ಪ್ರಶಾಂತ ಮನ
7)
ದುಡುಕದಿರು
ಮನವೇ ನೀ ಹುಡುಕು
ಕಂಡಾನು ಬುದ್ಧ

8)
ಜಗದ ತುಂಬಾ
ಕತ್ತಲೂ ಬೆಳಕಿದೆ
ಬುದ್ಧನೂ ಇಹ
9)
ನಡೆದೆ ಹೀಗೆ
ಗೊತ್ತು ಗುರಿಯಿಲ್ಲದೆ
ಸೇರಿದ ಬುದ್ಧ
10)
ಬಯಸಲೇನ
ಎಲ್ಲವೂ ಇರುವಾಗ
ಧ್ಯಾನಸ್ಥ ಬುದ್ಧ
11)
ಎಲ್ಲವೂ ಇದ್ದು
ಏನೂ ಇಲ್ಲದ ಹಾಗೆ
ಬುದ್ಧನೆಂದರೆ….!






0 Comments