
ಸುರೇಶ ಎಲ್ ರಾಜಮಾನೆ
ಪ್ರತಿದಿನ ಹುಟ್ಟುವ ಸೂರ್ಯ ಮನದಲ್ಲಿ ಮೂಡಿಸುವನು ವಿಶ್ವಾಸ
ಬೆಳಕಿನಲಿ ಬೆರಗನ್ನು ಬೆರೆಸಿ ಎದೆಯಲ್ಲಿ ತುಂಬುವನು ವಿಶ್ವಾಸ
ಕತ್ತಲೆಯ ಹಿಂದೆ ಬೆಳಕು ಬೆಳಕಿನ ಹಿಂದೆ ಕತ್ತಲು ಇದ್ದೆ ಇದೆ ಆದರೂ
ಸದ್ಧೆ ಇರದೆ ಸರಳುಗಳ ಒಳನುಗ್ಗಿ ಕರಳುಗಳಲ್ಲಿ ಸುರಿಯುವನು ವಿಶ್ವಾಸ
ಹಕ್ಕಿಗಳ ಕೊರಳಿಗೆ ಇಂಚರದ ಇಂಪು ನೀಡಿ ಕಿವಿಗೊಡುವನು
ಹಿತವಾದ ಹಾಡಾಗಿ ಗೂಡುಗೂಡುಗಳಲ್ಲಿ ಒಡಮೂಡಿಸುವನು ವಿಶ್ವಾಸ
ನೋಡುಗರ ಕಣ್ಣಲ್ಲಿ ಉರಿಯುವ ಜ್ವಾಲೆಯಾಗಿಯೇ ಕಾಣುವನು
ಮೊಳಕೆಯೊಡೆಯುವ ಬೀಜದ ಗರ್ಭದಲ್ಲಿ ತಾನಾಗುವನು ವಿಶ್ವಾಸ

ನೆತ್ತಿಯಮೇಲೆ ಸುಡುಬಿಸಿಲ ಚಲ್ಲಿ ಕತ್ತಿಯ ಕಣ್ಣಿಗೆ ಕಣ್ಮಿಟುಕಿಸುವನು
ಹತ್ತಿಯ ಹೂವಿಗೆ ಮುತ್ತಿನ ನಗೆಚಲ್ಲಿ ಹೆಚ್ಚಿಸುವನು ವಿಶ್ವಾಸ
ಸೂರ್ಯನೆಂದರೆ ಹಾಗೆ ಎಲ್ಲರಿಗೂ ಕತ್ತಲು ಬೆಳಕಿನ ಆಟದ ನಿರ್ಣಾಯಕ
ಸಂಜೆತ್ತಲಲಿ ಮುಳುಗಿ ಮತ್ತೆ ಹಿತ್ತಲಲ್ಲಿ ಹೊತ್ತುತರುವನು ವಿಶ್ವಾಸ






ಸುರೇಶ ರಾಜಮಾನೆ ಅವರ ವಿಶ್ವಾಸ ಗಜಲ್ ಅದ್ಭುತ ಸರ್