ವಿಭಾ ಪುರೋಹಿತ
ಕಂದನೀನು ಸೋರಿಹೋದೆ ಪಾತವಾದೆ ಹುರಿಯ ಕಿತ್ತಿ
ಛಂದದಿಂದ ಉಂಡುತಿಂದು ಬಳಲದಂತೆ ಜೋಕೆಯಿದ್ದೆ
ನಾಲ್ಕುಹನಿ ಬಿಕ್ಕಿಬರಲು ಗೋರಿ ಕೂಡ ಕಾಣದಾದೆ
ಒದ್ದೆಗಣ್ಣ ಸುಸ್ತುಗಣ್ಣ ಸ್ಮಶಾನಮೌನದಲ್ಲಿ ಕಾದೆ ಸುತ್ತಿ
ಗೋರಿಯೆಲ್ಲಿ ಅಮ್ಮಯೆನಗೆ ಹೆಣ್ಣುಭ್ರೂಣವಲ್ಲವೇ !
ಮೋರಿಯಲ್ಲಿ ಹರಿದು ಕೂಡೆ ಗಂಗೆಯೊಡಲ ಭಾವತೇವ
ದ್ರವಿಸುತಿದೆ ಗಾಯವಾಗಿ ಸ್ರವಿಸುತಿದೆ ಮಮತೆಸ್ರಾವ
ಉದರಕೆಲ್ಲ ತರಿದ ಉಗುರು ಗೀರುಗೀರು ಕಾಯವೆ !

ಈಗತಾನೆ ಮೊಳೆದ ನಾನು ಅಳಿದರೇನು ಬಂಧುರ
ನಿನ್ನ ಉಸಿರ ಬಿಸಿಯು ತಾಳಿ ತಿಳಿದು ಉಳಿಯಿಡು
ಮುಂದೆ ಬರುವ ಮುದ್ದು ಸೋದರಂಗೆ ಕಾಪಿಡು
ಸಾಕೆನಗೆ ಮೂರುಮಾಸ ನಿನ್ನ ಗರ್ಭಮಂದಿರ
ಉಸಿರಲಿಲ್ಲ ನೆಟ್ಟಗೆ ಹುಟ್ಟಲಿಲ್ಲ ಬೆಳೆಯಲಿಲ್ಲ
ಎಲ್ಲಿ ಕಲಿತೆ ಮಗಳೆ ನೀನು ಮೆರೆಯುತಿಹೆ ಮಹಾತ್ಯಾಗ !






0 Comments