ಗಜಲ್
ಎಂ ಎಂ ಶೇಕ್ ಕತ್ತನೂರು
ನೋವನ್ನು ಹೀಗೊಂದು ಸಲ ಕಣ್ಣಿಂದ ಸವರಿ ಬಿಡುವ ಮನಸ್ಸಾಗುತ್ತಿದೆ ಸಾಕಿ,
ಉರಿಯುವ ಕೆಂಡವೊಂದರ ಮೇಲಿನ ಬೂದಿ ಊದಿ ಬಿಡುವ ಮನಸ್ಸಾಗುತ್ತಿದೆ ಸಾಕಿ,
ದೇಹವೊಂದು ಕೊನರುತ್ತದೆ ತಂಗಾಳಿಯ ತಂಪಿನಲಿ ಒಮ್ಮೊಮ್ಮೆ
ಯಾತನಾಮಯ ಗಳಿಗೆಗಳಿಗೆ ಗೋರಿಯಿಂದ ಎದ್ದು ಬಿಡುವ ಮನಸ್ಸಾಗುತ್ತಿದೆ ಸಾಕಿ..!!
ನಿದ್ದೆಯಿಲ್ಲದೆ ತಲ್ಲಣಿಸುವ ನಿಟ್ಟುಸಿರುಗಳಿವೆ ಬದುಕಿಗೆ
ಕೊನೆಗೂ ನೆಮ್ಮದಿಯ ಕವಿತೆಯಿಂದ ಅತ್ತು ಬಿಡುವ ಮನಸ್ಸಾಗುತ್ತಿದೆ ಸಾಕಿ..
ಭುಗಿಲೆದ್ದ ಅ ಪ್ರೀತಿಯ ಸ್ಪರ್ಶ ತುದಿಗಾಲಲ್ಲಿ ನಿಂತಿದ್ದು ನಿಜ..
ಆದರೂ ಬದ್ದವಾಗಿರುವ ವ್ಯಥೆಯ ಕ್ಯೆ ಬಿಡುವ ಮನಸ್ಸಾಗುತ್ತಿದೆ ಸಾಕಿ..
ಕ್ಷಮೆಯ0ಚಿನ ಕಣ್ಣು ತೆವಗೊಂಡಿದ್ದು ಸುಳ್ಳಲ್ಲ ವಿದಾಯಕ್ಕೆ
ಮುನಿದುಕೊಂಡ ಅ ಶಬ್ದಗಳಿಗೆ ಅನಿರೀಕ್ಷಿತವಾಗಿ ಕರೆದು ಬಿಡುವ ಮನಸ್ಸಾಗುತ್ತಿದೆ ಸಾಕಿ..






ನಿದ್ದೆಯಿಲ್ಲದೆ ತಲ್ಲಣಿಸುವ ನಿಟ್ಟುಸಿರುಗಳಿವೆ ಬದುಕಿಗೆ
ಕೊನೆಗೂ ನೆಮ್ಮದಿಯ ಕವಿತೆಯಿಂದ ಅತ್ತು ಬಿಡುವ ಮನಸ್ಸಾಗುತ್ತಿದೆ ಸಾಕಿ..
– ಈ ಸಾಲುಗಳಿಂದಲೇ ಈ ಗಜಲ್ ಇಷ್ಟವಾಯಿತೆನ್ನುವಷ್ಟು ಕಾಡಿದವು ಈ ಸಾಲುಗಳು