ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯಕುಮಾರ ನೇರ್ವೆಕರ ಕವಿತೆ- ನಾ ಕೊಟ್ಟ ಸೀರೆ…

ವಿಜಯಕುಮಾರ ನೇರ್ವೆಕರ

ನಾ  ಕೊಟ್ಟ ಸೀರೆ,
ಅವಳ ಕೋಮಲ ಕೈ ಗಳನ್ನು
ಪಾತ್ರೆಯ ಬಿಸಿಯಿಂದ ರಕ್ಷಿಸಿದೆ.
ಒದ್ದೆ ಕಾಲುಗಳನ್ನು ಒಣಗಿಸಿ
ಜಾರದಂತೆ ನಡೆಸಿದೆ.
ಅವಳ ಅಂದ ಕಳೆಗುಂದದಂತೆ
ಕನ್ನಡಿಯ ಕಲೆ  ಒರೆಸಿದೆ.
ಕತ್ತಲೆಯಲ್ಲಿ ಬತ್ತಿಯಾಗಿ ಉರಿದು
ಬೆಳಕಿನ ಸಡಗರ ನೀಡಿದೆ.

ಕಿಟಕಿಯ ಪರದೆಯಾಗಿ
ಬೇಡದ  ನೋಟಗಳ ತಡೆದಿದೆ.
ದಿಂಬಿನ ಹೊದಿಕೆಯಾಗಿ
ಕಂಬನಿಗಳ ಕುಡಿದು ಸಂತೈಸಿದೆ.
ನಾ ಕೊಟ್ಟ ಸೀರೆ, ಇಂದು
ಹಲವು ಚೂರಾಗಿದೆಯಾದರೂ
ಹೊಸ ಬದುಕು ಕಟ್ಟಿಕೊಂಡ
ಅವಳ  ಚೂರೂ ಬಿಟ್ಟುಕೊಟ್ಟಿಲ್ಲ.

‍ಲೇಖಕರು Admin

13 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading