– ಆನಂದ ಜಕ್ಕಣ್ಣವರ
ಸುಲಧಾಳ
ನನ್ನ ಮನೆಯ ಸುತ್ತೆಲ್ಲ ಬರಿಯ ಗೋಡೆಗಳೇ ಇದ್ದು, ಕಿಟಕಿಗಳೆಲ್ಲ ಮುಚ್ಚಿರುವುದು ನನಗಿಷ್ಟವಿಲ್ಲ.
ಎಲ್ಲ ಸಂಸ್ಕೃತಿಗಳು ನನ್ನ ಮನೆ-ಮನವನ್ನು ಸದಾ ಪ್ರವೇಶಿಸುತ್ತಿರಲೇಂಬುದೇ ನನ್ನ ಆಸೆ
-ಮಹಾತ್ಮ ಗಾಂಧೀಜಿ.
ಇಂದಿನ ಪರಿಸ್ಥಿತಿಯಲ್ಲಿ ಈ ಮಾತು ಹಿಂದೆಂದಿಗಿಂತಲೂ ತುಂಬಾ ಪ್ರಸ್ತುತವಾಗಿದೆ. ಸಮಾಜದ ಸರ್ವವಿಧದ ದೃಷ್ಟಿಯಿಂದ, ಶಾಂತಿಮಯ ವಾತಾವರಣದ ನಿಟ್ಟಿನಲ್ಲಿ ವಿಕೃತಿಯಾಗುತ್ತಿರುವ ಮಾನವ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಕಾಪಾಡುವ ಉದ್ದೇಶದಿಂದಲಾದರೂ, ರಚನಾತ್ಮಕ ಚಟುವಟಿಕೆಗಳನ್ನು ಎಷ್ಟು ಸಾಧ್ಯವೋ ಅಷ್ಟನ್ನು ಕೈಗೊಂಡು ಸಂಸ್ಕೃತಿಯ ವಲಯವನ್ನು ಹಿಗ್ಗಿಸಬೇಕಾದ ಅನಿವಾರ್ಯತೆ ಇದೆ.
ಸಂಸ್ಕೃತಿಯು ವ್ಯಕ್ತಿಯನ್ನು ಸುಧಾರಿಸುತ್ತದೆ, ವ್ಯಕ್ತಿತ್ವವನ್ನು ಉಳಿಸುತ್ತದೆ-ಬೆಳೆಸುತ್ತದೆ. ಸಂಸ್ಕಾರವೇ ಇನ್ನೊಂದು ಅರ್ಥದಲ್ಲಿ ಸಂಸ್ಕ್ರತಿ ಎನಿಸುತ್ತದೆ. ಪರಂಪರೆ ಸಂಸ್ಕ್ರತಿಯ ಆಚಾರವೇ ಸಂಸ್ಕಾರ. ಸಂಸ್ಕಾರದಲ್ಲಿ ಆಧ್ಯಾತ್ಮಿಗಳ ಸಾರ ಅಡಗಿದೆ. ಒಬ್ಬ ವ್ಯಕ್ತಿಯಲ್ಲಿನ ಯುಕ್ತಿ ಅಥವಾ ವಿಚಾರಧಾರೆ ಜನರಿಂದಲೇ ಬಂದಿರುವುದಿಲ್ಲ. ಅದು ಅವನ ಸಂಸ್ಕಾರ, ಸಂಸ್ಕ್ರತಿ, ಹಾಗೂ ಸುತ್ತಮುತ್ತಲಿನ ಪರಿಸರವನ್ನು ಆಧರಿಸಿಯೇ ವಿಚಾರಶಕ್ತಿ ಬೆಳೆಯುತ್ತಾ ಹೋಗುತ್ತದೆ. ಅಂತೆಯೇ ಉತ್ತಮ ವಿಚಾರವಂತನಾಗಿರಲು ಸಾಧ್ಯ. ಇಂತಹ ಉತ್ತಮ ವಿಚಾರಗಳು ಸುತ್ತಲಿನ ಎಲ್ಲ ಮೂಲದಿಂದಲೂ ಬಂದಾಗ ಮಾನವ ಮಾನವೀಯತೆಯಿಂದ ಬದುಕಲು ಸಾಧ್ಯ. ಇದನ್ನೆ ನಾವು ಮಾನವಸಂಸ್ಕ್ರತಿ ಎಂದು ಕರೆಯಬಹುದು. ಮಾನವಸಂಸ್ಕ್ರತಿಯನ್ನು ಇನ್ನೂ ಮುಂದುವರೆದು ವಿವರಿಸಬಹುದಾದರೆ, ದಾಸರು ಬಹು ಹಿಂದೆಯೇ ‘ಮಾನವ ಜನ್ಮ ದೊಡ್ಡದು ಹುಚ್ಚಪ್ಪಗಳಿರಾ ಇದನ್ನು ಹಾನಿಗೊಳಿಸಿಕೊಳ್ಳಲು ಬೇಡಿ’ ಎಂಬ ಮಾತನ್ನು ಮನುಷ್ಯನ ಹಲ-ಕೆಲವು ಒಳ್ಳೆಯ ಹಾಗೂ ಕೆಟ್ಟದಾದ ಗುಣಗಳನ್ನು ಅವಲೋಕಿಸಿಕೊಂಡೇ ಹೇಳಿರುವಂತಹದ್ದಾಗಿದೆ. ನಿಜಕ್ಕೂ ಮನುಷ್ಯನೆಂಬ ಸಾಧುಪ್ರಾಣಿ ಮರ್ಕಟನಂತೆ ವತರ್ಿಸುತ್ತಿರುವುದನ್ನು ಗಮನಿಸಿದರೆ ನಿಜವಾದ ಮಾನವನ ಸಂಸ್ಕ್ರತಿ ಯಾವುದು? ಎಂಬುದನ್ನು ಅಥರ್ೈಸಿಕೊಳ್ಳಲೇಬೇಕಾಗುತ್ತದೆ.
ಮನುಷ್ಯ ಜೀವಿ ತನ್ನ ಶಿಶು ಹಂತದಿಂದ ವಯಸ್ಕ ಹಂತದವರೆಗೂ ತಲುಪಲು ಪಟ್ಟ ಕಷ,್ಟ ಸವೆಸಿದ ಹಾದಿ ಸರಳವಾದುದೇನು ಅಲ್ಲ. ಯಾಕೆಂದರೆ ಶಿಶುವಾದಾಗ ಎದ್ದು ನಿಂತುಕೊಳ್ಳಲು ಆತ ಮಾಡಿದ ಪ್ರಯತ್ನ ಮುಂದೆ ತನ್ನ ಎಲ್ಲಾ ಹಂತಗಳನ್ನು ತಲುಪುವ ಸನ್ನಿವೇಶಗಳಲ್ಲಿಯೂ ಪ್ರಯತ್ನ ಪಡುತ್ತಲೇ ಬಂದಿದ್ದಾನೆ. ಹೀಗೆ ಹಲವಾರು ಪ್ರಯತ್ನಗಳ, ಹಲವಾರು ವರ್ಷಗಳ ಆರೈಕೆಯ ಫಲವಾಗಿ ಮನುಷ್ಯರಲ್ಲಿ ಒಂದು ಹೊಂದಾಣಿಕೆ, ಒಂದು ಹೆಚ್ಚುತನ, ಒಂದು ಹಿರಿತನ ಕಾಣಿಸಿಕೊಳ್ಳುತ್ತವೆ. ಈ ಹೊಂದಾಣಿಕೆ, ಹೆಚ್ಚಳ, ಹಿರಿತನ ಮೂರೂ ಸೇರಿ ಮುಪ್ಪರಿಗೊಂಡ ಮನೋಭಾವನೆಯೇ ಸಂಸ್ಕ್ರತಿ. ಇದೇ ಮಾನವಸಂಸ್ಕ್ರತಿಯೆಂತಲೂ ಹೇಳಬಹುದು. ಆದರೆ ಈ ಕಲ್ಪನೆ ಬಹಳಷ್ಟು ಜನರಿಗಿಲ್ಲ. ಮಾನವರೆಂದರೆ ಜಗತ್ತಿನ ಯಾವ ಪ್ರಾಣಿಗೂ ಸಿಗಲಾರದ ದೊಡ್ಡದಾದ ಭಾಗ್ಯ ನಮಗೇದಕ್ಕಿದೆ, ನಾವೇ ಶ್ರೇಷ್ಟರು ಎಂಬ ಧಿಮಾಕಿನಲ್ಲಿಯೇ ಮನುಷ್ಯ ಮುನ್ನುಗ್ಗುತ್ತಿದ್ದಾನೆ. ಆದರೆ ಅವನು ಇನ್ನೂ ತಿಳಿದುಕೊಳ್ಳಬೇಕಾಗಿರುವುದು ಸಾಕಷ್ಟಿದೆ. ಕೇವಲ ಆಕಾರ ರೂಪ ಪಡೆದ ಮಾತ್ರಕ್ಕೆ ಮನುಷ್ಯನಾಗುವುದಿಲ್ಲ ಅವನಲ್ಲಿ ಮನುಷ್ಯತ್ವವೂ ಬೇಕಾಗುತ್ತದೆ.
ಮಾನವರಲ್ಲಿ ಮನುಷ್ಯತ್ವ ಬರಬೇಕಾದರೆ ಶಿಕ್ಷಣವೂ ಅವಶ್ಯಕವಾಗಿ ಬೇಕೆಂಬುದನ್ನ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಕೇವಲ ಓದು-ಬರಹ ಬಂದ ಮಾತ್ರಕ್ಕೆ ಮನುಷ್ಯ ಮನುಷ್ಯತ್ವವನ್ನು ಪಡೆದುಕೊಂಡ ಹಾಗೆಯೇ ಏನು? ಇದೆ ನಿಜವಾದರೆ ಆತ ಮನುಷ್ಯ ರೂಪದ ಗಿಳಿಯಂದೇ ಕರೆಯಬೇಕಾದೀತು. ಹೇಳಿಕೊಟ್ಟಿದ್ದನ್ನು ಯಾವ ಸಂಕೋಚಗಳಿಲ್ಲದೆ, ನಿಭರ್ಿಡೆಯಿಂದ ಹೇಳುವ ಗಿಳಿಯಂತೆ ಮನುಷ್ಯನೂ ಹೌದೆಂದು ಹೇಳಬೇಕಾದೀತು. ಓದಿದ್ದು ಜೀವನದ ಆಳಕ್ಕೆ ಇಳಿಯಬೇಕು ಅದರಿಂದ ಉಪಯೋಗವಾಗುವಂತಹ ಕಾರ್ಯಗಳು ಜರುಗಬೇಕು. ಅಂದಾಗ ಮಾತ್ರ ಮನುಷ್ಯ ಓದಿರೊದಕ್ಕೂ ಸಾರ್ಥಕವಾಗುತ್ತದೆ. ಈ ಕಾರ್ಯವು ಹೆಚ್ಚೆಚ್ಚು ಆದಂತೆ ಮನುಷ್ಯನಲ್ಲಿ ಮನುಷ್ಯತ್ವದ ಗುಣಗಳು ಬಂದು ಆತ ಮನುಷ್ಯನಂತೆ ಬಾಳುತ್ತಾನೆ. ಇಲ್ಲವಾದರೆ ಮೃಗೀಯ ಗುಣಗಳು ಮಾನವನ ಅಂಗಾಗಳಲ್ಲಿ ಸೇರಿ ಮನುಷ್ಯತ್ವದ ಕಲ್ಪನೆಯನ್ನೇ ಮರೆತು ಸಮಾಜದಲ್ಲಿಯ ಸಂಸ್ಕ್ರತಿಯನ್ನು ವಿಕೃತಿಯನ್ನಾಗಿಸುವಲ್ಲಿ ಮುಂದಾಗುತ್ತಾನೆ.
ಮಾನವ, ಸಮಸ್ತ ಸೃಷ್ಟಿಯೇ ತನಗಾಗಿ, ತನ್ನ ಉಪಯೋಗಕ್ಕಾಗಿ ಎಂದು ದೃಢವಾಗಿ ನಂಬಿರುವುದರಿಂದ ಇಡೀ ಪಶು-ಪಕ್ಷಿ, ಪ್ರಾಣಿ ಸಂಕುಲವನ್ನು, ಸ್ವೇಚ್ಛೆಯಾಗಿ ಬಳಸುತ್ತಾ ಬಂದಿದ್ದಾನೆ. ಆಹಾರಕ್ಕಾಗಿ ಮಾತ್ರವಲ್ಲ, ವಿಹಾರಕ್ಕಾಗಿ, ಮೋಜಿಗಾಗಿ, ಲಹರಿಗಾಗಿ ಅವುಗಳನ್ನು ಹಿಂಸಿಸಿ ಕೊಲ್ಲುತ್ತಾ ಬರುತ್ತಿದ್ದಾನೆ. ಅದನ್ನೇ ನಾಗರಿಕತೆ ಎಂದು ಸಹ ಭಾವಿಸಿದ್ದಾನೆ. ಅಷ್ಟೆ ಅಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಕುರಿ, ಕೋಣಗಳ ಶಿರಚ್ಛೇದನ ನಡಿಯುತ್ತಲೇಯಿರುತ್ತಿರುವುದು ನಾಗರಿಕ ಸಮಾಜ ನಾಚುವಂಥದ್ದಾಗಿದೆ. ಇದನ್ನೆಲ್ಲಾ ಕರ್ಮ, ಪಾಪವೆನ್ನೆಸಿಗಿದ ಮನುಷ್ಯನೇ ವೇದಿಕೆಯ ಮೆಲೇರಿ ಧರ್ಮ, ದಯೆ, ಪ್ರಾಣದಯೆ ಎಂದು ಘಂಟೆಗಟ್ಟಲೆ ಮಾತನಾಡುತ್ತಾ ಇಂತಹ ಅದೆಷ್ಟೋ ಅನಿಷ್ಟ ಪದ್ಧತಿಯಲ್ಲಿ ಪಾಲುದಾರನಾಗಿರುತ್ತಾನೆ. ‘ಕಳಬೇಡ, ಕೊಲಬೇಡ…’ಎಂದು ಹೇಳುವ ಬಸವಣ್ಣನವರ ವಚನ ಪ್ರಾಣಿವಧೆಯ ವಿರುದ್ಧ ಪ್ರತಿಭಟನೆಯಿಂದಲೇ, ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಅವರ ‘ಹಬ್ಬಕ್ಕೆ ತಂದ ಹರಕೆಯ ಕುರಿ’ ಎಂಬ ವಚನ, ಪ್ರಾಣಿಬಲಿಯ ವಿರುದ್ಧ ಸೆಟೆದುನಿಂತ ಸಮಾಜೋಧಾಮರ್ಿಕ ಆಂದೋಲನದ ಮನೋಧರ್ಮವಾಗಿ ಮೂಡಿಬಂದಿದೆ. ಇದಾವುದನ್ನೂ ಓದದ, ಗಮನಕ್ಕೆ ತಂದುಕೊಳ್ಳದ ಮನುಷ್ಯ ತನ್ನ ಇಚ್ಛೆಯಂತೆಯೇ ನಡೆದುಕೊಂಡು ಇರುವಂತಹ ಸಮೃದ್ಧ ಸಂಸ್ಕೃತಿಯನ್ನು ವಿಕೃತಿಗೊಳಿಸುತ್ತಿದ್ದಾನೆ. ಇದಕ್ಕೆ ತೀರಾ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ ನಿದರ್ಶನವಾಗಿದೆ. ಕುರಿಯನ್ನು ಎರಡು ಭಾಗ ಮಾಡಿ ರಸ್ತೆ ಪಕ್ಕದಲ್ಲಿ ಬೀಸಾಡಿಹೋದ ಘಟನೆ ನಾಗರಿಕ ಸಮಾಜ ಬೆಚ್ಚಿಬೀಳುವಂತಾಗಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಮಾಟ-ಮಂತ್ರ ವನ್ನು ನೀಷೆಧ ಮಾಡಿದ ಸಕರ್ಾರಕ್ಕೆ ತೀರಾ ಬುದ್ಧಿವಂತನೆನಿಸಿಕೊಂಡ ಮನುಷ್ಯ ನೀಡಿದ ಕೊಡುಗೆಯೂ ಆಗಿದೆ.
ನಾನು ನಾಗರಿಕ ಎಂದು ಹೇಳಿಕೊಳ್ಳುವ ಮನುಷ್ಯನ ಅನಾಗರಿಕ ಪ್ರವೃತ್ತಿಗಳಿಗೆನು ಕೊರತೆಯಿಲ್ಲಾ. ನಾಗರಿಕ ಎಂಬ ಶಬ್ಧದ ಅರ್ಥ ನೋಡಿದರೆ ನಗರ+ಇಕ=ನಾಗರಿಕ. ನಗರದಲ್ಲಿರುವವರು, ಪಟ್ಟಣದಲ್ಲಿರುವವರು ಎಂದು ಅಥರ್ೈಯಿಸಬಹುದು. ಪಟ್ಟಣ, ನಗರದಲ್ಲಿದ್ದ ಮಾತ್ರಕ್ಕೆ ಮನುಷ್ಯ ನಾಗರಿಕನಾದಂತೆ ಏನು? ನಾಗರಿಕನಾಗುವುದೆಂದರೆ, ಮಾನವನಾಗುವುದೆಂದರೆ, ಆತ ವಾಸ ಮಾಡುವಂತಹ ಪ್ರದೇಶ ನಗರವಾಗಿರಲಿ ಅಥವಾ ಹಳ್ಳಿಯೇ ಆಗಿರಲಿ ಬದುಕನ್ನು ನಡೆಸುವಂತಹ ಆಚಾರ, ವಿಚಾರಗಳು ಗೊತ್ತಿದ್ದರೆ ಸಾಕು, ಆತ ಓರ್ವ ಸಭ್ಯಸ್ಥ ನಾಗರಿಕನೆಂದು ಕರೆಯಬಹುದು. ಆದರೆ ಈ ಮನುಷ್ಯನಿಗೆ ಎಲ್ಲೆಂದರಲ್ಲಿ ತನಗೆ ಹೇಗೆ ಸರಿ ಕಾಣಿಸುತ್ತೋ ಹಾಗೆ ಅನ್ಯಾಯ, ಸುಲಿಗೆ, ಆತ್ಯಚಾರ, ದಬ್ಬಾಳಿಕೆಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾನೆ. ತೀರಾ ಇತ್ತೀಚಿನ ದಿನಗಳಲ್ಲಂತೂ ಮಾನವನಿಂದ ನಡೆಯುತ್ತಿರುವ ಇಂತಹ ಕಾರ್ಯಕ್ಕೆ ಇಡೀ ಮನುಕುಲವೇ ತಲೆತಗ್ಗಿಸುವಂತಹ ಪರಿಸ್ಥಿತಿ ನಿಮರ್ಾಣವಾಗಿಬಿಟ್ಟಿದೆ. ನಮ್ಮದಲ್ಲದ ಸಂಸ್ಕ್ರತಿಯನ್ನು ಬಲವಂತವಾಗಿ ಹೇರುವ ಮಾನವನ ಕುಕೃತ್ಯಗಳನ್ನು ಸಹಿಸಲು ಅಸಾಧ್ಯವಾಗಿದೆ.
ಮನುಷ್ಯ ಹೇಗಾಗಿದ್ದಾನೆಂದರೆ, ಆತನಿಗೀಗ ಪ್ರಚಾರದ ಗೀಳು ಅಂಟಿಕೊಂಡಿದೆ. ಹೇಗಾದರೂ ಸರಿ ಟಿ.ವಿ.ಯಲ್ಲಿ ಬರಬೆಕು ಎಂದು ಮಚ್ಚು, ಚೂರಿ ಹಿಡಿದುಕೊಂಡು ಕೊಲೆ ಮಾಡುವಷ್ಟರ ಮಟ್ಟಿಗೆ ಮಾನವನ ವಿಕೃತಿ ಬೆಳೆದು ನಿಂತಿದೆ. ಗುರುಗಳಿಗೆ ಕೈ ಮುಗಿದು ನಮಸ್ಕರಿಸುವ ಕಾಲಹೋಗಿ, ಕೈ ಎತ್ತಿ ಹೊಡಿಯುವಂತಾಗಿದೆ. ತೀರಾ ಇತ್ತೀಚೆಗೆ ತಮಿಳುನಾಡಿನ ತುತ್ತೂಕುಡಿ ಜಿಲ್ಲೆಯ ವಲ್ಲಾನಾಡಿನಲ್ಲಿ ತನ್ನನ್ನು ಕಾಲೇಜಿನಿಂದ ಅಮಾನತು ಮಾಡಿದರೆಂದು ‘ಇನಫಂಟ್ ಜೀಸಸ್ ಎಂಜನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿ’ನ ಪಿ.ಪಿಚೈಕಣ್ಣನ್ ಎಂಬ ವಿದ್ಯಾಥರ್ಿ ತನ್ನ ಗೆಳೆಯರೊಂದಿಗೆ ಸೇರಿಕೊಂಡು ಆ ಕಾಲೇಜಿನ ಪ್ರಾಚಾರ್ಯರಾದ ಎಲ್ಆರ್ಡಿ ಸುರೇಶ್ ಅವರನ್ನು ಹತ್ಯಗೈದ ಸುದ್ಧಿ ಕೇಳಿ ದಿಗ್ಬ್ರಾಂತಿ ಆಯಿತು. ಇನ್ನು ಮಹಿಳೆಯ ಕುರಿತಾಗಿ ಹೇಳುವುದಾದರೆ, ‘ಯತ್ರ ನಾರ್ಯಸ್ತು ಪೂಜ್ಯಂತೇ ತತ್ರ ರಮಂತೇ ದೇವತಾಃ’ ಎಲ್ಲಿ ಗೃಹಣಿಯು ಮಯರ್ಾದೆಯಿಂದ, ಪೂಜ್ಯಭಾವನೆಯಿಂದ ಪೂಜಿಸಲ್ಪಡುತ್ತಾಳೊ, ಅಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಎಂದು ತಲೆ-ತಲೆಮಾರುಗಳಿಂದಲೂ ಹೇಳುತ್ತಲೇ ಬಂದಿದ್ದೇವೆ. ಆದರೆ ವಿಕೃತ ಮನುಷ್ಯ ಮಾತ್ರ ಒಂಟಿ ಮಹಿಳೆ ಸಿಕ್ಕರೆ ಸಾಕು ಅವಳ ಮಾನಭಂಗಕ್ಕೆ ಮುಂದಾಗುತ್ತಿರುವುದು ನಿಜಕ್ಕೂ ಅಮಾನವೀಯವೇ ಆಗಿದೆ. ಬೀದರ ದಲ್ಲಿ ನಡೆದ ‘ನಂಗಾನಾಚ’ ಘಟನೆಯಂತೂ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಇತ್ತೀಚಿನ ದಿನಗಳಲ್ಲಂತೂ ಸಮಾಜದ ದಿಕ್ಕೇ ಬದಲಾಗುತ್ತಿದೆ. ಸಾಮಾಜಿಕ ಪ್ರಜ್ಞೆ ಇಲ್ಲವಾಗಿ ಜೀವನಾನುಭವಗಳನ್ನು ಗಾಳಿಗೆ ತೂರಿ ಮನುಷ್ಯ ಬದುಕಲು ಪ್ರಾರಂಭಿಸಿದ್ದಾನೆ. ಇವೆಲ್ಲದರ ಮಧ್ಯೆ ಹಳಸುತ್ತಿರುವ ದಾಂಪತ್ಯ ಸಂಬಂಧಗಳು, ಕೆಟ್ಟುಹೋಗುತ್ತಿರುವ ಗುರು-ಶಿಷ್ಯ ಸಂಬಂಧಗಳು, ನಶಿಸಿ ಹೋಗುತ್ತಿರುವ ಕೌಟುಂಬಿಕ ಪರಿಸರಗಳು, ಮನುಷ್ಯ-ಮನುಷ್ಯರಲ್ಲಿ ದ್ವೇಷ ಹುಟ್ಟಿ ಕೊಲೆಯಲ್ಲಿ ಅಂತ್ಯವಾಗುತ್ತಿವೆ, ಯಾವ ಸಂಬಂಧಗಳಿಗೂ ಬೆಲೆ ಇಲ್ಲದಂತೆ ನಡೆಯುತ್ತಿರುವ ಅತ್ಯಾಚಾರ,ಅನಾಚರಗಳ ಅವಘಡಗಳು ನಿರಂತರವಾಗಿ ಜರುಗುತ್ತಿರುವುದು ಮಾನವಸಂಸ್ಕ್ರತಿಯ ಕ್ರೂರ ವಿಕೃತಿಯಲ್ಲದೆ ಮತ್ತೇನು..






ನೀವು ಹೇಳಿದ್ದು ನಿಜಾನೇ ಹೌದು……
ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ ಮನಸಿನ ವಿಕೃತಿಗೆ ಇಂದು ಮನುಷ್ಯ ಇಳಿತಿದ್ದಾನೆ ಸರ್.ನೈತಿಕತೆ,ಮಾನವೀಯ ಮೌಲ್ಯಗಳೆ ಕಾಣ್ತಿಲ್ಲ ಸರ್…