ವಸುಂಧರಾ ಕದಲೂರು
ಕೆಸರಲ್ಲಿ ಕಂಬ ನೆಡುವ ನಿಜ
‘ಗ್ಯಾನಿ’ ನೀನು ನೆಟ್ಟ ಕಂಬದ
ಉಸ್ತುವಾರಿಗೆ ನನ್ನ ಬಿಡುವೆ.
ಕಂಬ ಚಿಗುರಿ ಹೂವೊಂದು ಅರಳಿಸುವ
ಆಶಯದಲಿ ಕಾಪಿಡುವ ಬೇಲಿ ಹಾಕುತ್ತೇನೆ
ಬೇಲಿಯ ಹೂಗಳೂ ಅದೆಷ್ಟು ಚೆಂದ!
ಹೂತ ಕಂಬ ಬೇರು ಬಿಡಲಿ: ಕೆಳಗೆ
ಬೇರು ಮೇಲೆ ಚಿಗುರು! ಬೇಲಿಹೂ ಗೆ
ಬರುವ ಜೇನುಹುಳು ಕೆಸರಿಗೆ ಬೀಳದಿರಲಿ

ನಿನ್ನ ಕಂಬ ಕೆಸರ ಜಾರಿ ಬೇಲಿ
ಮೇಲೆ ಉರಿಳದಿರಲಿ; ದುಂಬಿಗಳ
ಆಕರ್ಷಿಸುವ ಬೇಲಿಹೂಗಳು
ಅಪ್ಪಚ್ಚಿಯಾಗಿ ನಲುಗದಿರಲಿ
ಕೆಸರಲ್ಲಿ ನೀ ಕಂಬ ನೆಡುವ ಮುನ್ನ
ನಾ ನೆನಪಿಡುವೆ ಅಲ್ಲೂ ಮಣ್ಣುಂಟು
ನೀರುಂಟು ನೈದಿಲೆಯೂ ಉಂಟು!






0 Comments