ಗೋಳೂರು ನಾರಾಯಣಸ್ವಾಮಿ
ಯಾಟ ಕೋಳಿ ಹಿತ್ತಲಿನಲ್ಲಿ ಕ್ ಕ್ ಕ್ ಅನ್ನುತಿತ್ತು.
ಜನಪದ ಗರತಿ ಹಾಡು ಗುಣಗುತ್ತಿದ್ದಾಳೆ.
ಸ್ವರವ ಕ್ಯೋಳುತ್ತಿದಂತೆ ಅಂಬಾ ಎಂದಳು ಗೌರಿ.
ಮೈಸವರಿ ಸರ ಸರ ಹಾಲು ಕರೆಯುವ ಶಬ್ದ.
ಗರತಿಯ ಹಾಡು-
ಮುಗಿಯುವ ಮುನ್ನ ಬಂದ ಯಜಮಾನ
ಮಕರಿಗೆ ಕೆಲಸಕೊಟ್ಟನು.
ಹಕ್ಕಿಪಕ್ಕಿಗಳ ಕಲರವ ಶುರುವಾಯಿತು.
ಬೆಳಕು ಹರಿಯಿತು ನೆಲಕ್ಕೆ ತುಂಬಿದ ಹರವಿಯಿಂದ ನೀರು ಚಿಮುಕಿತು.

ಬಿದ್ದ ನೀರಿನ ಹನಿಗಳಿಗೆ ನೆಲವು ಘಮ್ಮೆಂದು ಊರ ತುಂಬಾ ಹಬ್ಬಿಕೊಂಡಿತು.
ಸೂರ್ಯ ರಶ್ಮಿಗೆ ರಂಗೋಲಿ ಪಳ ಪಳನೆ ಹೊಳೆಯುತ್ತಿತ್ತು.
ಕಣ್ಣು ಉಜ್ಜುತ್ತಾ ಗುಡಿಸಲಿನಿಂದ ಐಕಳು ಬಂದವು.
ಜಗುಲಿಯಲ್ಲಿ ಕುಳಿತಿದ್ದ ಅಜ್ಜಿಯ ಮಡಿಲೊಳಗೆ ಸೇರಿದವು.
ಒಲೆ ಹೊತ್ತಿತು ಮುದ್ದೆ ತಿರುವಿ,
ತಣಗದ ಬಿಸಿ ಆರುತ್ತಿದ್ದಂತೆ ಹೆಗಲ ಮೇಲೆ ನೇಗಿಲು ಹೇರಿತು.
ಧನಕರಗಳು ಹೊಲದ ಕಡೆ ಮುಖ ಮಾಡಿದವು.
ಈಗ ಮಜ್ಜಿಗೆಗಾಗಿ ಬಂದ ಮಾರವ್ವ ಒಂದ್ ಚಿಟ್ಕಿ ಕೊಡವ ಸಾಕು ಎನ್ನುತ್ತಿದ್ದಳು.






ಚೆನ್ನಾಗಿದೆ