ಕೆ.ಜೆ.ಕೊಟ್ರಗೌಡ ತೂಲಹಳ್ಳಿ
ಊರ ಬಯಲಿನ ದಿಬ್ಬದ ಮೇಲೆ
ಈ ಮಳೆಗಾಲಕ್ಕೆ
ಚಿಗುರೊಡೆದ ಹುಲ್ಲು ಗಂಬಳಿಯ
ಹಾಸಿನಲಿ
ನಾವಿಬ್ಬರೇ ಸಾನಿಧ್ಯವಹಿಸೋಣ
ಅದೆಷ್ಟು ಖಾಸಗೀ ಮಾತುಗಳು
ಬಾಕಿ ಉಳಿದಿವೆ!
ನಮ್ಮಿಬ್ಬರ ಮಧ್ಯೆ…
ಪ್ರತಿ ಗಾಳಿಯ ತಿಳಿ ಸ್ಪರ್ಶಕ್ಕೆ
ನಿನ್ನ ಅಂಗೈ
ನನ್ನ ನೆತ್ತಿಯ ನೇವರಿಸಲಿ
ನಿನ್ನ ಮಡಿಲು
ನನ್ನ ತೊಟ್ಟಿಲಾಗಿರಲಿ!
ಸಂಜೆಯಸೂರ್ಯ ಮಸುಕಾಗುವ
ಹೊತ್ತಿಗೆ
ನಿನ್ನ ಹಣೆಗೊಂದು
ಮುತ್ತು ಚುಂಬಿಸುವೆ
ಪ್ರೇಮದ ಮುದ್ರೆ
ಬಿಗಿಯಾಗಲು!
ಪ್ರಣಯದ ಸುಖ
ನಮಗೆಂದೂ ಅಪರೂಪ
ಆದ್ದರಿಂದ…

ಪ್ರೀತಿಯ ಸಖೀ…
ಪ್ರೇಮದ ಭಾಷೆ
ನಮ್ಮಿಬ್ಬರಿಗೆ ಮಾತ್ರ
ಸೀಮಿತ
ನಾವೋ
ಲೋಕದ ಕಣ್ಣಿಗೆ
ವಿರಹಿಗಳಾಗಿ
ಹೃದಯ ಬಾಗಿಲಿಗೆ
ಪ್ರೇಮದ ನಿಧಿಯಾಗಿರುವೆವು!
ಬಾ..
ಇದೋ
ಈ ಸಂಜೆಗೆ
ನಮ್ಮಿಬ್ಬರ ಪ್ರಣಯದ
ಓಟ ಸಾಕ್ಷಿಯಾಗಲಿ..
ಬಿಗಿದಪ್ಪಿ ಅತ್ತುಬಿಡೋಣ
ನಮ್ಮಿಬ್ಬರ ವಿರಹದ ಕೂಪ
ತಣ್ಣಗಾಗಿ
ಪರಪ ಪವಿತ್ರ ಪ್ರೇಮಿಗಳಾಗಿಬಿಡೋಣ..
ಲೋಕದ ಕಣ್ಣು
ಮರುಗಲೂಬಹುದು!
ಆಗಲಾದರೂ….






0 Comments