ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೆನಿನ್ ಜಗತ್ತಿನುದ್ದಗಲ ನಡೆಯುತ್ತಾನೆ..

~ ಲಾಂಗ್ಸ್ಟನ್ ಹ್ಯೂಗ್ಸ್

ಕನ್ನಡಕ್ಕೆ: ಸಂವರ್ತ ‘ಸಾಹಿಲ್’

ಲೆನಿನ್
ಇಡೀ ಜಗತ್ತು ಸುತ್ತಾಡುತ್ತಾನೆ
ಗಡಿಗಳಿಗೆ ಅವನನ್ನು ತಡೆಯಲಾಗುವುದಿಲ್ಲ,
ಸೈನ್ಯಕ್ಕೆ ತಡೆಯೊಡ್ಡಲಾಗುವುದಿಲ್ಲ
ತಡೆಗೋಡೆ ಅವನಿಗೆ ತೊಡಕಾಗುವುದಿಲ್ಲ
ಮುಳ್ಳಿನ ಬೇಲಿಗಳು ಅವನನ್ನು ಗಾಯಗೊಳಿಸುವುದಿಲ್ಲ.

ಲೆನಿನ್
ಜಗತ್ತಿನ ಮೂಲೆಮೂಲೆಯನ್ನು ತಲುಪುತ್ತಾನೆ
ಕಪ್ಪು, ಕಂದು, ಬಿಳಿ
ಎಲ್ಲಾ ಮಂದಿ ಅವನನ್ನು ಸ್ವಾಗತಿಸುತ್ತಾರೆ
ಭಾಷೆ ಎಂದೂ ಅಡ್ಡಿಯಾಗುವುದಿಲ್ಲ
ಗುರುತಿಲ್ಲದ ಭಾಷಿಕರೂ
ನಂಬುತ್ತಾರೆ ಅವನನ್ನು.

ಲೆನಿನ್ ಜಗತ್ತಿನುದ್ದಗಲ ನಡೆಯುತ್ತಾನೆ
ಸೂರ್ಯ ಗಾಯಗೊಂಡು
ರಕ್ತಸಿಕ್ತನಾಗಿ ಮುಳುಗಿದಾಗ
ಹಗಳಿರುಳುಗಳ ನಡುವೆ
ಒಂದು ಕೆಂಪು ನಕ್ಷತ್ರ ಮೂಡುತ್ತದೆ.

‍ಲೇಖಕರು avadhi

7 March, 2018

2 Comments

  1. nutana doshetty

    Lenin Pratimeyannu Moscow dalle Ilisi dashakagale Kalidive.

  2. kadameblog

    ನೈಸ್,
    ಗುರುತಿಲ್ಲದ ಭಾಷಿಕರೂ ನಂಬುತ್ತಾರೆ ಲೆನಿನ್ ನನ್ನು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading