ಚುನಾವಣೆಗಳ ಹೊಸ್ತಿಲಲ್ಲಿ ಹನಿಗವನಗಳ ಪ್ರಣಾಳಿಕೆ
ಜಾರಿ
ಚುನಾವಣೆ ಹತ್ತಿರ ಬಂತು
ಈಗಾಗಲೇ
ನೀತಿ ಸಂಹಿತೆ ಜಾರಿ;
ಮತದಾರರೇ
ಎಚ್ಚರಿಕೆ, ಬೀಳದಿರಿ ಜಾರಿ!
ಗಗನಕ್ಕೇರಿದ ಬಿಲ್ಲು
ಆಕೆಯೆಂದಳು-
“ಗೆಳೆಯ ಆಕಾಶ ನೋಡು-
ಮೂಡಿದೆ ಕಾಮನ ಬಿಲ್ಲು”;
ನಾ ನೋಡಿದರೆ ಕಂಡಿದ್ದು-
ಪೆಟ್ರೋಲ್, ಗ್ಯಾಸ್,
ಕರೆಂಟ್ ಬಿಲ್ಲು!
ಪ್ರಣಾಳಿಕೆ
ಅವರದ್ದು
ಅತ್ಯುತ್ತಮ
ಚುನಾವಣಾ ಪ್ರಣಾಳಿಕೆ;
ಆರಿಸಿ ಬಂದ ಮೇಲೆ
ಮುಕ್ಕಿ ತಿಂದರು,
ಪ್ರಜೆಗಳಿಗೆ ಮಿಕ್ಕಿದ್ದು
ಬರೀ ಪಳೆಯುಳಿಕೆ!
ಹಕ್ಕು
ಸರ್ಕಾರ ಹೇಳುತ್ತಿದೆ-
“ದೇಶ ನಿರ್ಮಾಣದಿ
ನಿಮಗೆ ಹಕ್ಕಿದೆ”;
ಎಲ್ಲಾ ಅವರು ತಿಂದಾಯ್ತು
ಇನ್ನೇನು ಮಿಕ್ಕಿದೆ?!
ರಾಜ(ಡಿ)ಕೀಯ
ಕೆಲವರದು
ಜಾತಿ ರಾಜಕೀಯ,
ಕೆಲವರದು
ಕುಟುಂಬ ರಾಜಕೀಯ;
ಒಟ್ಟಿನಲ್ಲಿ
ಪ್ರಜೆಗಳ ಹಣ ಮಾಯ!
ತೆರಿಗೆ ಎಲ್ಲಿಗೆ?
ನಾವು ಕೊಡುವ
ತೆರಿಗೆಯಿಂದ
ತುಂಬಿದ್ದು
ಭ್ರಷ್ಟ ಮಂತ್ರಿಗಳ
ಮನೆಯ ಚೆರಿಗೆ!
ಮಠ ರಾಜಕೀಯ
ಮಠಗಳಿಗೆ
ಕೋಟಿ;
ಜನ ಸಾಮಾನ್ಯರಿಗೆ
ಚಾಟಿ!
ತೋರಿಕೆಯ ಯೋಜನೆ
ಚುನಾವಣೆ ಸಮಯ
ಹತ್ತಿರ ಬರುತ್ತಿದ್ದಂತೆ
ಹಲವಾರು ಯೋಜನೆಗಳ
ಜಾರಿ;
ಗೆದ್ದು ಬಂದ ಮೇಲೆ
ಹೇಳುವರು-
“ನೀವ್ಯಾರೋ ಗೊತ್ತಿಲ್ಲ
sorry”








ಹನಿಗಳ ಚಾಟಿ… ಒಂದಕ್ಕಿಂದ ಒಂದು ಏಟು ಜೋರಾಗಿದೆ…
ಚಂದದ ಹನಿಗಳು. ಕವಿಮನದ ಭಾವಗಳಲ್ಲಿ ಸಾಮಾಜಿಕ ತುಡಿತ ಇರುವುದು ಅರ್ಥವಾಗುತ್ತದೆ.
– ಪ್ರಸಾದ್.ಡಿ.ವಿ.
ಹನಿಗಳ ಚಾಟಿ… ಒಂದಕ್ಕಿಂದ ಒಂದು ಏಟು ಜೋರಾಗಿದೆ…
ಚಂದದ ಹನಿಗಳು
punch paresh! 🙂