ಪ್ರೀತಿ ಎಂದರೇನು..?
– ರಾಘವೇಂದ್ರ ಜೋಶಿ
ಪ್ರೀತಿ ಅಂದರೇನು?
ಅಂತ ಬೆಳ್ ಬೆಳಿಗ್ಗೆ ಕೇಳಿದಳು.
“Love is the fundamental..”
ಅಂದವನಿಗೆ-
ಡಿಕ್ಷನರಿ ಭಾಷೆ ಬೇಡವೆಂದು
ಮಾತು ತುಂಡರಿಸಿದಳು.
ಪ್ರೀತಿ ಎಂದರೆ ಜಗಳವೆಂದೆ:
ಶರಂಪರ ಜಗಳವಾಡಿದಳು.
ಇನ್ನೆಂದೂ ಮುಖ ನೋಡಲಾರೆ
ಅಂದವಳೇ ಸಂಜೆ ಹೊತ್ತಿಗೆ
“ಏನ್ ಗೊತ್ತ…”
ಅಂತ ಹೇಳಿಕೊಂಡು ಬಂದಳು.
ನಿನ್ನ ಎಲ್ಲ ಕ್ರಿಯೆ-ಪ್ರತಿಕ್ರಿಯೆಗಳೇ
ಪ್ರೀತಿಯ ಡೆಫಿನಿಶನ್ ಅಂದಿದ್ದಕ್ಕೆ
ಮತ್ತೇ ತುಟಿಯುಬ್ಬಿಸಿಕೊಂಡು
ನಾಚಿ
ನೀರಾಗಿ
ಕರಗಿ
ಹರಿದುಹೋದಳು!
]]>






nice…
ಸರ್,ಮತ್ತೊಂದು ಹಿಟ್ ಕವನ ತುಂಬಾ ಕುಶಿಯಾಯ್ತು … ಮುಂದಿನ ಕವನದ ನಿರೀಕ್ಷೆಯಲ್ಲಿ ….
ರವಿ ವರ್ಮ ಹೊಸಪೇಟೆ
Aaha…!
tumba chenagide..
Super….
tumba chennagide sir…….
tumba chennagide sir………