
ಮಂಜುನಾಥ್ ಕಾಮತ್
ಲವ್ ಆಗ್ಬಿಡ್ತು ಕಣ್ರಿ. ನಿಜವಾಗ್ಲೂ. ಲವ್ @ ಫರ್ಸ್ಟ್ ಸೈಟ್ ಅಂತಾರಲ್ಲ. ಹಂಗೇನೇ… ಹುಡುಗಿ ಹೆಸ್ರು ನೀರಜಾ. ಶೌರ್ಯಪ್ರಶಸ್ತಿ ವಿಜೇತೆ.
ವಯಸ್ಸು ಇಪ್ಪತ್ತಮೂರು. ಈಗ ಅಲ್ಲ. ನಾನು ಹುಟ್ಟೋ ಎರಡು ವರುಷ ಮುಂಚೆ, ಅವ್ಳು ತೀರಿಕೊಂಡಾಗಿನ ವಯಸ್ಸದು. ತೀರಿಕೊಂಡ್ಳು ಅನ್ನೋದಕ್ಕಿಂತ ಮುನ್ನೂರಕ್ಕೂ ಹೆಚ್ಚು ಮಂದಿಯ ಪ್ರಾಣ ಉಳಿಸಿ ತಾನು ಸತ್ತು ಸ್ಪೂರ್ತಿಯಾದ್ಲು ಅನ್ನೋದೇ ಸರಿ.
ಇವ್ಳ ಬಗ್ಗೆ ಪ್ರೈಮರಿಯಲ್ಲಿ ಪಾಠ ಇತ್ತು ಅಂತಾರೆ. ಆದ್ರೆ ಓದಿದ್ದು ನೆನಪಿಲ್ಲ. ಅವ್ಳ ಬಗ್ಗೆ ಏನೊಂದೂ ಗೊತ್ತಿರ್ಲಿಲ್ಲ. ಲವ್ @ ಫರ್ಸ್ಟ್ ಸೈಟ್ ಅಂದಿದ್ದು ಅದ್ಕೇನೇ.
ಸೋನಂ ಕಪೂರ್ ಅಭಿನಯದ “ನೀರ್ಜಾ” ಹಿಂದಿ ಸಿನಿಮಾ ನೋಡಿ ಬನ್ನಿ. ನಿಮಗೂ ಅವ್ಳ ಮೇಲೆ ಲವ್ ಆಗಿ ಬಿಡುತ್ತೆ. ಅಚಾನಕ್ಕಾಗಿ ಎದುರಾದ ದೊಡ್ಡ ಸಂಕಷ್ಟವೊಂದನ್ನು ಆಕೆ ಎದುರಿಸುವ ರೀತಿಯನ್ನು ಕಂಡು ಹೆಮ್ಮೆ ಅನ್ಸುತ್ತೆ.
ಅಕ್ಷಯ್ ಕುಮಾರ್ ಅವ್ರ Airlift ನಂತೆಯೇ ಈ ಸಿನಿಮಾವೂ ಇರಬಹ್ದು ಅಂತನ್ನಿಸಿತ್ತು ಮೊದಲು. ಆದರಿದು ಮತ್ತೂ ವಿಭಿನ್ನವಾಗಿದೆ. ನೋಡಿ ಬನ್ನಿ.
ಇಪ್ಪತ್ಮೂರನೇ ಹುಟ್ಟು ಹಬ್ಬ (sep7-1986) ಆಚರಿಸಬೇಕೆಂದಿದ್ದವಳು ಆ ದಿನಕ್ಕೆ ಎರಡು ದಿನದ ಹಿಂದೆ ಭಯೋತ್ಪಾದಕರ ಗುಂಡಿಗೆ ಬಲಿಯಾಗ್ತಾಳೆ. ಗಗನ ಸಖಿಯಾಗಿದ್ದ ನೀರ್ಜಾ ಮನ್ಸು ಮಾಡಿದ್ದಿದ್ರೆ ಎಮರ್ಜೆನ್ಸಿ ಎಗ್ಸಿಟ್ ಓಪನ್ ಮಾಡಿದ ಕೂಡ್ಲೇ ಹೊರಗೋಡಿ ತಪ್ಪಿಸಿಬಿಡಬಹುದಿತ್ತು. ಆದ್ರೆ ಉಳಿದವ್ರ ಜೀವ ಉಳಿಸೋದಕ್ಕಾಗಿ ಅವ್ಳಲ್ಲೇ ನಿಂತು ಕೊನೆಯವಳಾಗಿ ಕೊಲೆಯಾಗಿ ಹೋದಳು.





0 Comments