ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಕ್ಷ್ಮಿಕಾಂತ್ ಇಟ್ನಾಳ್ ಅನುವಾದಿಸಿದ ಗುಲ್ಜಾರ್ ಕವನ

ಅನುವಾದ : ಲಕ್ಷ್ಮೀಕಾಂತ ಇಟ್ನಾಳ

ಮೂಲ : ಗುಲ್ಜಾರ ಸಾಹಬ್

ಈ ಜಂಗಲೀ ಗಿಡಗಳ ರೆಂಬೆಗಳ ಮೇಲೆ
ಕೆಲ ಶಬ್ದಗಳು ಚಿಗಿಯುವವು, ಕೆಲವೊಮ್ಮೆ,
ಆದರೆ, ಹಾಡಾಗುವುದಿಲ್ಲ ಯಾವುದೂ…….!
 
ಈ ಗಿಡಗಳಿಗೆ ಹೊಟ್ಟೆತುಂಬ ಎಂದೂ ಸಿಗದು
ಬೇರುಗಳಿಂದ ಮಣ್ಣನ್ನು ಗಟ್ಟಿಯಾಗಿ ಹಿಡಿವಷ್ಟು ಕೂಳು,
ಬೇರುಗಳನ್ನು ಪೋಷಿಸಲು ಇವುಗಳಿಗೆ
ಸಿಗುವುದಿಲ್ಲ ಕೂಡ, ಕುಂಡಗಳು
ರಸ್ತೆಗಳಲ್ಲಿ ಬಿಸಾಡಿ ಬಿಡಲಾಗುತ್ತದೆ, ಕಸವೆಂದು
ಧೂಳು, ಹಸಿವು ಹಾಗೂ ಭಿಕ್ಷೆಗಳಿಂದ ಜೀವ ಹಿಡಿದಿರುತ್ತವೆ
ಇವುಗಳಲ್ಲಿ ಒಮ್ಮೊಮ್ಮೆ ಕೆಲವಕ್ಕೆ ಒದೆ ಬಿದ್ದು, ತುಳಿತಕ್ಕೆ ಸಿಕ್ಕು
ಹೋಗಿ ಬೀಳುತ್ತವೆ ಕೆಸರು ತುಂಬಿದ ಹರಿವ ಮೋರಿಗಳಲ್ಲಿ
 
ಅದೇ ಕೆಸರಿನಲ್ಲಿ ನೀರು ಮಣ್ಣು ಹುಡುಕಿ ಮತ್ತೆ ಬೆಳೆಯುತ್ತವೆ ….!
 
ಮತ್ತೆ ಮತ್ತೊಂದು ಬೀದಿ
ಮತ್ತೊಂದು ಹೊಸ ಲತ್ತೆ
ಮತ್ತೊಂದು ದಲಿತ ಸಸಿ!!
 

‍ಲೇಖಕರು G

20 December, 2014

6 Comments

  1. ಡಾ.ಶಿವಾನಂದ ಕುಬಸದ

    ಗುಲ್ಜಾರರನ್ನು ‘ಅರ್ಥವತ್ತಾಗಿ’ ಕನ್ನಡಕ್ಕೆ ತರುತ್ತಿದ್ದೀರಿ.ಸುಂದರ ಕವನ

    • lakshmikath itnal

      dhanyavadagalu sir, H A Patil,and Dr. Shivanand Kubasad tamma pratikriyegalige. vandane mattomme.

  2. Hanumanth Ananth Patil

    ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
    ಒಂದೊಳ್ಳೆ ಅರ್ಥಪೂರ್ಣ ಕವನ ರೆಂಬೆಗಳ ಮೇಲೆ ಶಬ್ದಗಳು ಚಿಗಿಯುವುದು ಅದರೆ ಅವು ಹಾಡಾಗದೆ ಇರುವುದು ಬಹಳ ನೋವಿನ ಸಂಗತಿ.ಅರಹೊಟ್ಟೆಯ ಅ ಗಿಡಗಳು ಛಲಬಿಡದೆ ಗಾಳಿ ಬೆಳಕು ನೀರನರಸಿ ಹೋಗುವುದು ಬೆಳೆಯವುದು ಬದುಕಿನ ಮತ್ತು ಛಲದ ಜೀವಂತಿಕೆಯ ಸಂಕೇತ. ಮತ್ತೊಂದು ಬೀದಿ ಮತ್ತೊಂದು ಲತ್ತೆ ಮತ್ತೊಂದು ದಲಿತ ಸಸಿ.ಕವನ ಗರಿಗಟ್ಟುವುದೆ ಕೊನೆಯ ಸಾಲುಗಳಲ್ಲಿ, ಇದೊಂದು ಸಮರ್ಥ ಅನುವಾದ.

  3. mmshaik

    very nice ..

  4. Talikatte L Santosh

    ಅನುವಾದ ಚೆನ್ನಾಗಿದೆ ಸರ್ !

  5. sunilpatil

    good

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading