ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೋಹಿಣಿ ಸತ್ಯ ಹೊಸ ಕವಿತೆ- ನಂಜು

ಧಗ ಧಗನೆ ಉರಿಯುವ ನಂಜಿನ ಪಂಜು
ಎದೆಯಲ್ಲಿ ನೆಟ್ಟಿರಲು ಎಲ್ಲಿಯ ನೆಮ್ಮದಿ
ಸುಡುವ ಮುನ್ನ ನಿನ್ನ ವೈರಿಯನ್ನು
ಸುತ್ತುಗಟ್ಟುವುದಲ್ಲವೇ ನಿನ್ನನ್ನು

ದ್ವೇಷ ಮಡುಗಟ್ಟಿದ ದೇಹದಲ್ಲಿ
ಮೀನಿನಂತಹ ಪ್ರಾಣ ಈಜುವ ಮಾತೆಲ್ಲಿ

ನೊರೆಯುಕ್ಕುವ ಕಡಲ ತೆರೆಗಳು
ಧರೆ ಬಿರಿದ ಹಸಿರ ಒಡಲು
ಹಾಲು ಸುರಿವ ಬೆಳದಿಂಗಳು
ಹಂಚುವ ನಂಜರಿಯದ ಪ್ರೀತಿಗೆ
ನಾಕ ಭೂಲೋಕಗಳೇ… ಎಲ್ಲೆ

ನೀನಾದರೂ ಎಲ್ಲಿ??
ಆ ಎಲ್ಲೆಯ ನಡುವೆಯಲ್ಲವೇ!

ನಂಜಿನ ಬೀಜ ಹುಟ್ಟಾದರೂ ಎಲ್ಲಿ?
ಬೆಳೆದು ಹೆಮ್ಮರವಾಗಿದ್ದಾದರೂ ಹೇಗೆ?
ಅಸಹನೆ-
ಬ್ರಹ್ಮಾಂಡವೆಲ್ಲ ಹರಡುವ ಮುನ್ನವೇ
ಎಚ್ಚೆತ್ತು ಮುನ್ನಡೆ
ಬುಡ ಸಮೇತ ಕಿತ್ತೊಗೆದು
ಸ್ನೇಹ-ಪ್ರೇಮ ಮೆರೆ!

‍ಲೇಖಕರು Avadhi

3 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading