ಬಾಲ್ಯ ಕಾಲ ಸಖಿ ಎನ್ನುತ್ತಾರೆ. ಸುಮ್ಮನೆ ನಾವು ಪಿಳಿ ಪಿಳಿ ಕಣ್ಣು ಬಿಡುತ್ತಾ ಉರು ಹೊಡೆದ ಪದ್ಯಗಳನ್ನು ಜ್ಞಾಪಿಸಿಕೊಳ್ಳಿ. ವೋಹ್, ಏನು ಮಜಾ. ಆ ಕಾಲಕ್ಕೆ ಜಾರಿ ಹೋಗುತ್ತೇವಲ್ಲ?
ಅಜ್ಜನ ಕೋಲಿದು ನನ್ನಯ ಕುದುರೆ, ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ….
ರೊಟ್ಟಿ ಅಂಗಡಿ ಕಿಟ್ಟಪ್ಪ ನಂಗೊಂದು ರೊಟ್ಟಿ ತಟ್ಟಪ್ಪ…
ಬಾಳೆಯ ತೋಟದ ಪಕ್ಕದ ಕಾಡೊಳು ವಾಸಿಸುತಿದ್ದವು ಮಂಗಗಳು…
ಎನಿತು ಸುಂದರ ಆ ದಿನ.
ನಮ್ಮೆಲ್ಲರ ಪ್ರೀತಿಯ ಕಲಾವಿದ ಪ ಸ ಕುಮಾರ್ ಬಹುತೇಕ ಎಲ್ಲಾ ಮಕ್ಕಳ ಕವಿತೆಗಳಿಗೂ ತಮ್ಮ ರೇಖೆಯ ಮಾಂತ್ರಿಕ ಸ್ಪರ್ಶ ನೀಡಿದ್ದಾರೆ. ಅದು ನೋಡಲೂ ಚೆಂದ. ನೋಡುತ್ತಾ ನೋಡುತ್ತಾ ಮರೆತು ಹೋಗಿಲ್ಲದ ಆ ಸಾಲುಗಳನ್ನು ಗುನುಗಲೂ ಚೆಂದ. ಪ ಸ ಕುಮಾರ್ ಬರೆದ ಆ ಚಿತ್ರಗಳನ್ನು ಆಗೀಗ ‘ಅವಧಿ’ ನಿಮ್ಮ ಮುಂದೆ ಇಡುತ್ತದೆ.



ರೊಟ್ಟಿ ಅಂಗಡಿ ಕಿಟ್ಟಪ್ಪ ನಂಗೊಂದು ರೊಟ್ಟಿ ತಟ್ಟಪ್ಪ…
ನಿಮಗೆ ಇವೂ ಇಷ್ಟವಾಗಬಹುದು…





ಈ ಚಿತ್ರಗಳೂ ಇಡೀ ನಮ್ಮ ಬಾಲ್ಯವನ್ನು ನೆನಪಿಗೆ ತಂದವು. ತುಂಬಾ ಖುಷಿ ಆಯಿತು.
ಸುಂದರ ರೇಖೆಗಳು. ಸಣ್ಣ ಸಣ್ಣ details ಕೂಡ ಸುಮಾರುಹೊತ್ತು ಗಮನಿಸಿ ನೋಡುವಂತೆ ಇವೆ.
ನನ್ನ ಬಾಲ್ಯದಲ್ಲಿ ನಾನು ಯಾವಾಗಲು ರೈಮ್ಸ್ ಓದುತ್ತ ಇದ್ದ ’ಲಿಟ್ಲ್ ಮದರ್ ಗೂಸ್’ ಪುಸ್ತಕ ನೆನಪಾಯಿತು.
ಆಮೇಲೆ ಇನ್ನೊಂದು ವಿಷಯ ’ರೊಟ್ಟಿ ಅಂಗಡಿ ಕಿಟ್ಟಪ್ಪ..’ ಹಾಡಿಗೆ
’bakers man, bakers man,
bake me a cake
as fast as you can’
ಎಂಬ ಮಕ್ಕಳ ಹಾಡು ಸ್ಫೂರ್ತಿ. ಆದರೆ ಇದನ್ನ ಕನ್ನಡದಲ್ಲಿ
ಬರೆದವರು ಯಾರೊ?