ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೈಲು ಕಂಪಾರ್ಟ್ಮೆಂಟ್, ಮಂತ್ರ ಮತ್ತು ಬಿರಿಯಾನಿ

ಶ್ರೀನಿವಾಸ ಎಂ.

1

ಮೈಸೂರು-ಮಂಗಳೂರು ರೈಲು,
ಒಂದು ಕಂಪಾರ್ಟ್ಮೆಂಟ್-ಎರಡು ಕುಟುಂಬ,
ಬೆಳಕು ಸರಿದು, ಕತ್ತಲು ಹರಿದ ಸಮಯ,
trainಉಪವಾಸ ಕುಳಿತು, ಮಂತ್ರಪಠಿಸುತ್ತಿರುವ ಮೂವರು ಮಹಿಳೆಯರು,
ಮಟನ್ ಬಿರಿಯಾರಿ ಚಪ್ಪರಿಸುತ್ತಿರುವ ಮುಸ್ಲಿಂ ಕುಟುಂಬ,
ಮಂತ್ರದ ಸುಸ್ವರ-ಬಿರಿಯಾನಿಯ ಘಮಘಮ!!!
(ಅವರವರ ಭಾವಕ್ಕೆ-ಅವರವರ ಭಕುತಿಗೆ)

2
ಮಂತ್ರದ ಮಹಿಮೆ!

ಬಿರಿಯಾನಿಗೊಳಗೆ ಹುದುಗಿದ್ದ ಕುರಿಗೆ
ಸ್ವರ್ಗ ಪ್ರಾಪ್ತಿಸಿತೋ, ಇಲ್ಲವೋ!
ಮಕ್ಕಳಂತೂ ಕೇಳಿ ನಲಿದರು, ನುಲಿದರು,
ಹಿಂದೆಂದೂ ಕೇಳದ ಸ್ವರ ಮಹಿಮೆ,
ಮಂತ್ರ ಕೇಳುತ್ತಲೆ ಬಿರಿಯಾನಿ ಸವಿದರು,
ಊಟ ಮಾಡಲೊಲ್ಲೆ ಎಂಬ ಹಠವಿಲ್ಲ,
ಅಮ್ಮ ಕೂಡಾ ದಿಲ್ ಖುಷ್!

3
ಬಿರಿಯಾನಿ ಚಮತ್ಕಾರ!

ಛಿ, ಥೂ ಅನ್ನೋ ಮಾತಿಲ್ಲ,
ಮಂತ್ರ ಪಠಿಸುತ್ತಿದ್ದವರ ದೃಷ್ಟಿ ಮಕ್ಕಳೆಡೆಗೆ,
ಆಗಾಗ, ಕನ್ನಡಕದ ಎಡೆಯಿಂದ ನಗು ಮಿಂಚು,
ಓದುತ್ತಲೇ ಪುಟ್ಟ ಕಂದಮ್ಮನ ಕಣ್ತುಂಬಿಕೊಂಡ
ಸಹೃದಯಿ..ಮಂಗಳೂರಿನೊರೆಗೂ ಪ್ರೀತಿಯ ಜುಗಲ್ಬಂದಿ!

4
ಕನಸಲ್ಲವಿದು, ನಿಜ
ರೈಲಿನೊಗೊಂದು ಎದ್ದ ನೀರ್ಗುಳ್ಳೆ,
ಹಳಿ ಕಂಡಾಗಲೆಲ್ಲ ಮೂಡುವ ಈ ಚಿತ್ರ,
ಬೆಳಕು ಕಂಡಾಗಲೆಲ್ಲ ಮಾಯವಾಗುತ್ತದೆ!

 

ಶ್ರೀನಿವಾಸ. ಎಂ./ ಹಿರಿಯ ವರದಿಗಾರ/ ಡೆಕ್ಕನ್ ಕ್ರಾನಿಕಲ್ 

‍ಲೇಖಕರು admin

11 April, 2016

2 Comments

  1. Shama, Nandibetta

    “ಮಂತ್ರದ ಸುಸ್ವರ-ಬಿರಿಯಾನಿಯ ಘಮಘಮ!!!” ದಲ್ಲಿ ಹುಟ್ಟು ಹೊಸ ಬದುಕಿನ ಸಾಧ್ಯತೆಗಳು “ಬೆಳಕು ಕಂಡಾಗಲೆಲ್ಲ ಮಾಯವಾಗುತ್ತದೆ!” ಎಂಬ ದಟ್ಟ ವಿಷಾದದಲ್ಲಿ ಕರಗಿ ಹೋಗುವ ನಮ್ಮ ಸಮಾಜದ ನೈಜತೆಯ ಸಹಜ ಚಿತ್ರಣವನ್ನ ಸೊಗಸಾಗಿ ಕಟ್ಟಿದ ಕವಿತೆ

  2. deepthi

    very nice..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading