ರೇಷ್ಮಾ ಗುಳೇದಗುಡ್ಡಕರ್ ಓದಿದ ‘ಡಿ ವಿ ಜಿ ಸಾಹಿತ್ಯ ಸಿರಿ’

ರೇಷ್ಮಾ ಗುಳೇದಗುಡ್ಡಕರ್

ಇಂದು ಡಿ ವಿ ಗುಂಡಪ್ಪ ಅವರ ಹುಟ್ಟು ಹಬ್ಬ.

ಅವರ ಹುಟ್ಟು ಹಬ್ಬದ ನೆನಪಿಗಾಗಿ ರೇಷ್ಮಾ ಗುಳೇದಗುಡ್ಡಕರ್ ಹಾ ಮಾ ನಾಯಕ್ ಅವರ ‘ಡಿ ವಿ ಜಿ ಸಾಹಿತ್ಯ ಸಿರಿ’ ಕೃತಿಯ ಕುರಿತ ಬರಹ ಇಲ್ಲಿದೆ

ಡಿ.ವಿ.ಜಿ ನಾಡಿನ ಹೆಸರಾಂತ ಕವಿ, ಕಥನಕಾರ, ನಾಟಕಕಾರ, ಸಂಸ್ಕೃತಿ ಚಿಂತಕ ಮತ್ತು ದಾರ್ಶನಿಕರು ಅವರಿಂದ  ನಾಡಿನ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಶ್ರೀಮಂತವಾಯಿತು ಅವರ ನಾಡು-ನುಡಿಯ ಸೇವೆ ಅವಿಸ್ಮರಣೀಯವಾದುದು.

ಕೃತಿ ಡಿವಿಜಿ ಸಾಹಿತ್ಯ ಸಿರಿ ಹೆಸರಿಗೆ ತಕ್ಕಂತೆ ಸಾಹಿತ್ಯದ ಸಿರಿಯೇ ಇಲ್ಲಿ ಹರಿದಿದೆ. ಕೃತಿ ಪುಟ್ಟರಾದರೂ ಇಲ್ಲಿರುವ ವಿಷಯ ವಸ್ತು ಅಗಾಧವಿದೆ.

ಅದರಲ್ಲೂ ಇದನ್ನು ಸಂಪಾದನೆ ಮಾಡಿರುವವರು ಜನಪ್ರಿಯ ಲೇಖಕರಾದ ಹಾ.ಮಾ.ನಾಯಕ ಅವರು ಈ ಪುಟ್ಟ ಕೃತಿ ಅವರ ಜನ್ಮ ಶತಮಾನೋತ್ಸವಕ್ಕಾಗಿ ರಚಿಸಿದ ಹಲವು ಕೃತಿಗಳಲ್ಲಿ ಒಂದಾಗಿದೆ. ಇದು ಡಿವಿಜಿಯವರ ಜೀವನ ಸಾಧನೆ ಕುರಿತ ಸ್ಥೂಲ ಪ್ರಬಂಧ ಕೃತಿಯಾಗಿದೆ.

ಮೊದಲಿಗೆ ಕೃತಿಯಲ್ಲಿ  ಡಿವಿಜಿ  ಅವರ ಅಪರೂಪದ ಚಿತ್ರವೊಂದು ಕಾಣಸಿಗುತ್ತದೆ. ಈ ಕೃತಿಯನ್ನು  ಮೂರು ಭಾಗವಾಗಿ ವಿಂಗಡಿಸಬಹುದು.

ಮೊದಲ ಭಾಗ ಡಿವಿಜಿ ಅವರ ವೈಯಕ್ತಿಕ ಜೀವನದ ವಿವರಗಳು ಇದ್ದರೆ ಎರಡನೆಯ ಭಾಗ ಅವರ ಕೃತಿಗಳ ಬಗ್ಗೆ ಮತ್ತು ಇತರ ಕೃತಿಗಳು ಅವರ ಮೇಲೆ ಪ್ರಭಾವ ಮಾಡಿದ ಬಗ್ಗೆ ಕುರಿತು ಇದೆ ಮೂರನೇ ಭಾಗ.

ಅನುಬಂಧಗಳು  ನಂತರ  ಡಿವಿಜಿ ಅವರ ಬದುಕಿನ ಪ್ರಮುಖ ಹೆಜ್ಜೆಗಳು ಹಾಗೂ ಡಿವಿಜಿ ಅವರಿಂದ ರಚಿಸಲ್ಪಟ್ಟ ಕೃತಿಗಳ ಮಾಹಿತಿ, ಮತ್ತು ಡಿವಿಜಿ ಕುರಿತ ಇತರ ಲೇಖಕರು ಬರೆದ ಕೃತಿಗಳ ಬಗ್ಗೆ ಮಾಹಿತಿಯನ್ನು ಕೊನೆಯ ಪುಟದಲ್ಲಿ ಕಾಣುತ್ತೇವೆ.

ಕೃತಿಯಲ್ಲಿ ಡಿವಿಜಿ ಅವರ ಬದುಕಿನ ಬಗ್ಗೆ ಹಲವಾರು ವಿಸ್ಮಯಕರ ವಿಚಾರಗಳು ಓದುಗರ ಗಮನ ಸೆಳೆಯುತ್ತವೆ ಒಂದು ಸಾಮಾನ್ಯ ಬ್ರಾಹ್ಮಣ ಮನೆತನದಿಂದ ಬಂದ ಗುಂಡಪ್ಪನವರು ಹಲವಾರು ಏಳು -ಬಿಳುಗಳನ್ನು  ಬಾಲ್ಯದಲ್ಲಿ ಅನುಭವಿಸಿದರು ವಿದ್ಯಾಭ್ಯಾಸವು ಕೌಟುಂಬಿಕ ತೊಂದರೆಯಿಂದ   ಮೈಸೂರಿನಿಂದ ಮತ್ತೆ ಕೋಲಾರಕ್ಕೆ ವರ್ಗಾವಣೆ ಆಯಿತು, ಪ್ರೌಢ ತರಗತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿಯಲ್ಲಿ ಹೆಚ್ಚು ಪಾಂಡಿತ್ಯ ಗಳಿಸಿದ್ದರು, ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ  ಕನ್ನಡ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ತೆರ್ಗಡೆಯಾಗಲಿಲ್ಲ..!

ಆದರೂ ಡಿವಿಜಿಯವರು ವ್ಯಥೆ ಪಡಲಿಲ್ಲ ಏಕೆಂದರೆ ಅವರಿಗೆ ಬದುಕಿನ ದೊಡ್ಡ ವಿಶ್ವವಿದ್ಯಾಲಯವೇ ಕೈಮಾಡಿ ಕರೆಯುತ್ತಿತ್ತು ಎಂದು ಲೇಖಕರು ಹೇಳಿದಾಗ ಡಿವಿಜಿಯವರ ಮನೋಸ್ಥೈರ್ಯ ದ ಬಗ್ಗೆ ಮೆಚ್ಚುಗೆ ಮತ್ತು ಅಚ್ಚರಿಯಾಗುತ್ತದೆ, ಅಲ್ಲದೆ ಇಡೀ ಕೃತಿಯಲ್ಲಿ ಡಿವಿಜಿ ಅವರ ವ್ಯಕ್ತಿತ್ವ, ಅವರು ಪಾಲಿಸಿದ ಬದುಕಿನ ಆದರ್ಶಗಳು ಹಾಗೂ  ಅವರಲ್ಲಿದ್ದ ಆಶಾಭಾವದ ಬಗ್ಗೆ ಪ್ರಖರವಾಗಿ ಮೂಡಿ ಬಂದಿದೆ.

ಮನೆಯವರಿಗೆಲ್ಲ ಸರ್ಕಾರಿ ನೌಕರಿ ಇಷ್ಟ ಇದ್ದರೂ ಡಿವಿಜಿ ಅವರು ಸ್ವತಂತ್ರವಾಗಿ ಉದ್ಯೋಗ ಮಾಡಲು ಬಯಸುತ್ತಾರೆ, ಈ ಉದ್ಯೋಗದಲ್ಲೂ ಅವರು ಹಲವಾರು ರೀತಿ  ತೊಂದರೆಗಳನ್ನು ಅನುಭವಿಸುತ್ತಾರೆ ಯಾವ ಕೆಲಸದಲ್ಲಿ ಹೆಚ್ಚು ಕಾಲ  ಅವರು ಉಳಿಯುವುದಿಲ್ಲ, ಆದರೂ ಎಲ್ಲಿಯೂ ಡಿವಿಜಿಯವರು ಧೃತಿಗೆಡದೆ ಇದ್ದದು ಲೇಖಕರು ಮನೋಜ್ಞವಾಗಿ ವಿವರಿಸಿದ್ದಾರೆ, ಪತ್ರಿಕೋದ್ಯಮದಲ್ಲಿ ವೃತ್ತಿ ಆರಂಭಿಸಿದರು, ಅಲ್ಲಿಯೂ ಒಂದೆಡೆ ನಿಲ್ಲದೆ ಹಲವಾರು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ ಬರುತ್ತದೆ ಕಾರಣ “ಸತ್ಯ ಪ್ರತಿಪಾದನೆ ಪತ್ರಿಕೋದ್ಯೋಗಿಯ ಪ್ರಥಮ ಕರ್ತವ್ಯ” ಎಂಬ ಅವರ ನಿಲುವಿನಿಂದ ಆಗ ಅ ವರಿಗೆ 24ವರ್ಷ  ವಯಸ್ಸಾಗಿರುತ್ತದೆ..!, ಎಂದು ತಮ್ಮ ಧ್ಯೇಯಗಳನ್ನು ರಾಜಿ ಮಾಡಿಕೊಳ್ಳದ, ಬದುಕಿನ  ಎಲ್ಲಾ ಸವಾಲುಗಳಿಗೂ  ಜಗ್ಗದ, ಹಲವಾರು  ದಿಗ್ಗಜರು ಸ್ನೇಹಿತರು ಇದ್ದರು ಎಂದು ಡಿವಿಜಿ  ಸ್ವಾಹಿತಾಸಕ್ತಿ ಗಾಗಿ ಸ್ನೇಹ ಬಳಕೆ ಮಾಡಿಕೊಳ್ಳಲಿಲ್ಲ,ಗೌರವ ಮುನ್ನಡೆಗಳಿಗೆ ಹಂಬಲಿಸಲಿಲ್ಲ, ಪತ್ರಿಕೆಯಲ್ಲಿ ಸರ್ಕಾರವನ್ನು ಟೀಕಿಸಿ ಬರೆದು ಹಲವು ಬಾರಿ ಪತ್ರಿಕೆ ಮುಚ್ಚುವಂತ ಪ್ರಸಂಗ ಬಂದರು ಎದೆಗುಂದಲಿಲ್ಲ , ಡಿವಿಜಿಯವರ ಶತಮಾನೋತ್ಸವ ಸಂದರ್ಭದಲ್ಲಿ ಅವರು ನಗದುಗೊಳಿಸದ ಚೆಕ್ಕುಗಳನ್ನು ಸಹ ಪ್ರದರ್ಶನಕ್ಕೆ ಇಟ್ಟಿರುವುದನ್ನು ಲೇಖಕರಾದ ಹಾ. ಮಾ ನಾಯಕ್ ಈ ಪುಸ್ತಕದಲ್ಲಿ ಅಭಿಮಾನದಿಂದ ನೆನೆಯುತ್ತಾರೆ. 

ಮತ್ತು ಕಷ್ಟಕರವಾದುದು ಶ್ರೇಯಸ್ಕರ ಎಂದು ನಂಬಿ ಅದರಂತೆ ಬಾಳಿ ಬದುಕಿದವರು ಡಿವಿಜಿ. ಎಂಬುದನ್ನು ಹಾ. ಮಾ. ನಾಯಕ್ ಅವರು ಹೇಳಲು ಮರೆಯುವುದಿಲ್ಲ.

ಇನ್ನು ಅವರ ಸಾಹಿತ್ಯದ ಸ್ಥೂಲ ಪರಿಚಯದಲ್ಲಿ ಡಿವಿಜಿ ಅವರ ಸಾಹಿತ್ಯದ ಹಂದರ ವಿಶಾಲನೋಟವ ಕಾಣಬಹುದು. ಕಾವ್ಯಾ, ಅನುವಾದ, ನಾಟಕ ಪ್ರಬಂಧ ಜೀವನ ಚರಿತ್ರೆ ತತ್ವಶಾಸ್ತ್ರ ರಾಜಕೀಯ ಧಾರ್ಮಿಕ ಎಲ್ಲ ಪ್ರಕಾರಗಳಲ್ಲಿಯೂ ಅವರ ಲೇಖನ ಧಾರಾಳವಾಗಿ ಹರಿದು ಕನ್ನಡ ನುಡಿಯನ್ನು ಶ್ರೀಮಂತ ಗೊಳಿಸಿದೆ, ಮತ್ತು ಅನುವಾದ ಮಾಡಿದಾಗ ಮೂಲ ಕೃತಿಯ ಆಶಯಕ್ಕೆ ಧಕ್ಕೆ ಬರದಂತೆ ಅನುವಾದ ಮಾಡಿದ ಹೆಗ್ಗಳಿಕೆ ಡಿವಿಜಿಯವರದು ಎಂದು ಹಲವಾರು ಕೃತಿಗಳ ಬಗ್ಗೆ ಚರ್ಚಿಸಿದ್ದಾರೆ ಡಿವಿಜಿಯವರ ಶಿಶು ಸಾಹಿತ್ಯವಾದ ಬೆಕ್ಕೋಜಿ, ಇಂದ್ರವಜ್ರ ಕೃತಿಗಳನ್ನು ಸಹ ಅವರು ಪ್ರಕಟಿಸಿ ಮಕ್ಕಳ ಸಾಹಿತ್ಯವನ್ನು ಸಹ ಶ್ರೀಮಂತಗೊಳಿಸಿ  ಮಕ್ಕಳಿಗೆ ನೀತಿ ಬೋಧನೆಯನ್ನು ಕಥೆಗಳಿಂದಲೇ ಮಾಡಬಹುದು ಎಂಬುದನ್ನು ಸಹ ತೋರಿಸಿದರು ಎಂದು ಲೇಖಕರು ಹೇಳುತ್ತಾರೆ.

ಡಿವಿಜಿ ಅವರ ಭವ್ಯ ಜೀವನ ದೃಷ್ಟಿ ನಾಡಿಗೆ ಆದರ್ಶಪ್ರಾಯ ಅವರ ಕೃತಿಯಾದ ಮಂಕುತಿಮ್ಮನ ಕಗ್ಗ ಅತಿವ್ರವಾಗಿ ಆಕರ್ಷಿಸಿತು ಇದನ್ನು ಬರೆದವರು ಬದುಕು ಹೇಗಿರುತ್ತದೆ ಎಂಬ ತಿಳಿಯುವ ಕುತೂಹಲ ಅದಮ್ಯವಾಗಿತ್ತು. ಕಾರಣ ಮಂಕುತಿಮ್ಮನ ಕಗ್ಗ  ಕೃತಿ ನನ್ನು ಬಹುವಾಗಿ  ಆಕರ್ಷಿಸಿತ್ತು, ಕನ್ನಡದ  ಅಪೂರ್ವ ಕೃತಿ. ಇಲ್ಲಿ ಚರ್ಚಿಸದ ವಿಚಾರಗಳಿಲ್ಲ, ಡಿ.ವಿ.ಜಿ. ಅವರ ನಿರ್ವಾಜ್ಯ ಜೀವನವೆ  ಅಂತಹ ಕೃತಿಗಳ  ಹುಟ್ಟಿಗೆ ಕಾರಣ. ಸಾಹಿತ್ಯ ಸಿರಿಯಲಿ ಸಿರಿಯಾಗಿ ಮೂಡಿ ಬಂದಿದೆ.

ಸ್ವಾವಲಂಬನೆಯ ಬದುಕಿನಿಂದಲೇ ಸ್ವಾತಂತ್ರವಾದ ಬರಹ ಸಾಧ್ಯ ಎಂಬುದಕ್ಕೆ ಡಿವಿಜಿ ಅವರ ಬರಹಗಳು ಸಾಕ್ಷಿಯಾಗಿ ನಿಲ್ಲುತ್ತವೆ.

‍ಲೇಖಕರು avadhi

March 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: