ಮುಂಬೈನ ಮೈಸೂರು ಅಸೋಸಿಯೇಷನ್ ನ ಪ್ರತಿಷ್ಠಿತ ಕವನ ಸ್ಪರ್ಧೆಯಲ್ಲಿ ಅಂಕೋಲದ ರೇಣುಕಾ ರಮಾನಂದ ಹಾಗೂ ತಾ ಶ್ರೀ ಗುರುರಾಜ್ ಅವರ ಕವಿತೆಗಳಿಗೆ ಮೊದಲ ಬಹುಮಾನ ಸಂದಿದೆ.
ಸಂಘ ಏರ್ಪಡಿಸಿದ್ದ ‘ನೇಸರು ಜಾಗತಿಕ ಕವನ ಸ್ಪರ್ಧೆಯಲ್ಲಿ ರೇಣುಕಾ ಅವರ ‘ಎಲ್ಲಿದ್ದೆವು ಇಷ್ಟು ದಿನ’ ಕವಿತೆ ಹಾಗೂ ಗುರುರಾಜ್ ಅವರ ‘ಮುನಿಬ್ಯಾಡ ಮಳೆಯೇ’ ಬಹುಮಾನಕ್ಕೆ ಪಾತ್ರವಾಗಿದೆ.
ಜೂನ್ ೨೪ ರಂದು ಮುಂಬೈನಲ್ಲಿ ಜರುಗುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಡಾ ಗಣಪತಿ ಶಂಕರಲಿಂಗ ತಿಳಿಸಿದ್ದಾರೆ
ಖ್ಯಾತ ಸಾಹಿತಿಗಳಾದ ಡಾ ಸುನೀತಾ ಶೆಟ್ಟಿ ಹಾಗೂ ಜಯಂತ ಕಾಯ್ಕಿಣಿ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು
ಇತ್ತೀಚಿಗೆ ತಾನೇ ರೇಣುಕಾ ರಮಾನಂದ ಅವರ ಕಾವ್ಯ ಹಸ್ತಪ್ರತಿಗೆ ಶ್ರೀಮತಿ ಸುಶೀಲಾ ಶೆಟ್ಟಿ ಪ್ರಶಸ್ತಿ ಘೋಷಿಸಲಾಗಿತ್ತು .
ಉಳಿದ ಬಹುಮಾನ ವಿಜೇತರ ವಿವರ ಇಲ್ಲಿದೆ







ಗೆಲುವು ಪಡೆದ ಕವಿತೆ ಕವಿಗಳಿಗೆ ಅಭಿನಂದನೆಗಳು …
congrats . padya haaki plse