ರೇಖಾ ರಂಗನಾಥ
ಕಿಡಕಿ ತೆರೆದಡೆ
ಓಡುವ ಭೂತದ ನೆರಳು
ಆತನ ಎದುರು
ಹೇಗೆ.. ನೀ..?
ಬಿಡು, ನಿನಗೆ ಆತಂಕವಿರದು…
ಹಾಜರಾಗಲೇ ಬೇಕಲ್ಲವೇ ನೀ ..?
ಆತ್ಮ ಸಾಕ್ಷಿಯ ಕಟಕಟೆಯಲಿ..
ದೊರೆಯ ದರ್ಬಾರು
ದೇಗುಲ ಗೋಪುರ
ಪಂಜುಗಳ ಮೆರವಣಿಗೆ
ಅಗೋ..!
ಬೆಳಕು ಮಿಂದು
ಕಾತರಿಸುವ ಕಣ್ಣುಗಳು..

ಹೊಳೆ ದಂಡೆ ಸಾಲು
ಧೋ.. ಸುರಿವ ಮಳೆ
ಇಗೋ… ನೀರುದುಂಬುವ ಹಬ್ಬ!
ಮೈ ನೆರೆದು ಕೂತ ಸಕ್ಕರೆ ಗೊಂಬೆ
ಯುಗದ ಕುರುಹು
ಹಗಲು..
ಹಾಲು ಬಾನ
ಹಯನವನುಂಡು
ಇರುಳಲಿ..ಚಂದಿರನಿಗೆ
ನೀನಿತ್ತ ಬದುವು…
ಏನೆಂದು ಉತ್ತರಿಸುವೆ!
ನಿನ್ನಂತೆ..
ಜಗವು ಎಣಿಕೆಯಲಿ ವ್ಯಸ್ತ
ಕೈ ಹಿಡಿದು ನಡೆಯಲೇ ಬೇಕಿದೆ
ಮೌನದೊಳಗೊಂದು ಮಾತು
ಬಯಲು ಹಾಳೆಯ ಅಜ್ಞಾತವಾಸ.






Fine ಚೆನ್ನಾಗಿದೆ