ಶಶಿಕಲಾ ಬೆಳಗಲಿ
ರಾಹುಲ ನೀನು ಹುಟ್ಟಿದಾಗ ನಾವು ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯ ಒಂದು ರೂಮಿನ ಪುಟ್ಟ ಮನೆಯಲ್ಲಿದ್ದೆವು,
ಆಗ ರಾಹುಲ ಸಾಂಕೃತ್ಯಾಯನರ ‘ಓಲ್ಗಾ ಗಂಗಾ’ ಪುಸ್ತಕ ಓದುತ್ತಿದ್ದೆವು,
ಅವರ ಹೆಸರನ್ನು ನಿನಗೆ ಇಟ್ಟೆವು
ನೀನು ಜನಿಸಿದ ದಿನ ನಮ್ಮ ಕೈಯಲ್ಲಿ ಹಣವಿರಲಿಲ್ಲ, ಪಕ್ಕದ ಕೋಣೆಯಲ್ಲಿದ್ದ ಹಾನಗಲ್ ನ ವಿದ್ಯಾರ್ಥಿಗಳಿಂದ ಐದು ರೂಪಾಯಿ ಪಡೆದು ಮಧ್ಯರಾತ್ರಿ ೧೨ ಗಂಟೆಗೆ ಹುಯಿಲಗೋಳ ದವಾಖಾನೆಗೆ ಬಂದೆವು, ಬೆಳಗಿನ ಜಾವ ನೀನು ಜನಿಸಿ ನನ್ನನ್ನು ತಾಯಿಯನ್ನಾಗಿ ಮಾಡಿದೆ.
ಆ ದವಾಖಾನೆಯಲ್ಲಿದ್ದ ರಾಬರ್ಟ ಅವರ ಪತ್ನಿ ವಿದ್ಯಕ್ಕ ಚೆನ್ನಾಗಿ ನೋಡಿಕೊಂಡರು, ದವಾಖಾನೆಯಿಂದ ಮನೆಗೆ ಬಂದರೆ ಬಾತ್ ರೂಮಿಲ್ಲದ ಆ ಮನೆಯ ಬಾಗಿಲಲ್ಲಿ ಮರೆ ಮಾಡಿ ನಿನಗೆ ಸ್ನಾನ ಮಾಡಿಸಬೇಕಾಯಿತು, ಸುರಿವ ಮಳೆಯಲ್ಲೇ ಕೊಡೆ ಹಿಡಿದು ನಿನಗೆ ಸ್ನಾನ ಮಾಡಿಸುತ್ತಿದ್ದೆವು..
ಇಂಥ ಮನೆಗೆ ದಾವಣಗೆರೆಯ ಕಮ್ಯೂನಿಸ್ಟ್ ಶಾಸಕರಾಗಿದ್ದ ಕಾಮ್ರೆಡ್ ಪಂಪಾಪತಿ, ಹುಬ್ಬಳ್ಳಿಯ ಕಾಮ್ರೆಡ ಮುಧೋಳ ಮತ್ತು ನವಕರ್ನಾಟಕದ ಆರ್ ಎಸ್ ರಾಜಾರಾಮ ಬಂದು ನಿನ್ನನ್ನು ನೋಡಿದ್ದರು,
ಇದು ನಾವುತುಳಿದ ಕಲ್ಲು ಮುಳ್ಳಿನ ದಾರಿ ಈಗ ಇಲ್ಲಿಗೆ ಬಂದು ನಿಂತಿದ್ದೇವೆ ನೀನು ದೊಡ್ಡವನಾಗಿರುವೆ ಇದನ್ನು ಬರೆಯಬೇಕೆನಿಸಿತು ,






0 Comments