ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಮಾಂಜಿನಯ್ಯ ಕವಿತೆ – ರೆಕ್ಕೆ ತೆರೆಯುವುದೆಂದರೆ?

ರಾಮಾಂಜಿನಯ್ಯ ವಿ

ರೆಕ್ಕೆ ತೆರೆಯುವುದೆಂದರೆ?
ವಿಶಾಲ ಬಾಂದಳಕ್ಕೆ ಜಿಗಿತ
ಡಂಬ ಆಚರಣೆ
ಮಾನವೆಂಬ ಕೂಪದ ಮಾನ
ಮಾನವನ ವಿಕೃತಿ ಬಯಕೆ
ಅವಳು ಅವನು ಎಂಬ ಗೋಡೆ
ಇವೇ ತನ್ನನ್ನು ಸುತ್ತಿರಲು
ರೆಕ್ಕೆ ಬಲಿಯುವುದೆಂತು?
ಹಾರುವುದಿನ್ನೆಂತು?
ಹಾರುವುದೆಂದರೇನು ಮನುಷ್ಯ ಕಟ್ಟುಗೆಯ
ಮುರಿದೆವೆಂದೇ?
ಕಿಟಕಿ ಕಿಂಡಿ ಬಾಗಿಲುಗಳ ಚಿಲಕ ಜಡಿದೆವೆಂದೇ?

ತನ್ನಿಷ್ಟದ ಬದುಕು ಇದೆಲ್ಲದರ ಆಚಿನ ಬಯಲು
ಬದುಕು ಚರಕ ಚಕ್ರವಾಗದೆ
ಬಣ್ಣಬಣ್ಣಗಳ ನೂಲು ನೇಯ್ವ ಪಯಣ
ರೆಕ್ಕೆ ಬಿಚ್ಚಲಿ ಅದಕ್ಕೆ
ಹಾರಲಿ ಬಿಡಿ ಅಂದದಾಕಾಶಕ್ಕೆ.

ಪ್ರೇಮಕ್ಕೆ ಉಸುಬು ದಾರಿಯೂ
ಚಂದವೇ
ಮಧ್ಯ ಅಳಬಹುದು, ತೊಡರು ಬಂದು
ಮಸಗು ಹೋಗಿ
ಮತ್ತಿನ್ನೇನೊ ಆದರೂ
ತಿರೆ ದೊಡ್ಡದು ಎಂಬ ನಂಬಿಕೆಯ ಮತ್ತು
ಸದಾ ಜೊತೆಗಿರುವುದು.

ಗಡಿಗಳಾಚೆಗೂ
ಸಾಗರದಲೆಗಳಿಗೂ
ಅಸಂಖ್ಯಾ ತಾಮಸಗಳಿಗೂ ಎದುರುಗೊಳ್ಳುವುದೆಂದರೆ
ಅದು ಲೇಶವಲ್ಲ ಅಲ್ಪವಲ್ಲ
ಹಾರುವ ಎಲ್ಲ ಶಕ್ತಿ
ಯುಕ್ತಿಯನ್ನ ಸೆದೆಬಡಿವುದು!

ಅಪ್ಪಿಕೊಳ್ಳುವ ಮನಸ್ಸು, ಹೆಚ್ಚುತನ
ಮನುಷ್ಯನಿಗೆ ತಾನೆ ಬೇಕಿರುವುದು?

‍ಲೇಖಕರು Avadhi

19 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading