ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾತ್ರಿಯ ಹಾಸಿಗೆಗಳಲಿ ಸಂಗಾತಿಗಳಾಗುತ್ತಾರೆ..

ravi dravid

ರವಿ ದ್ರಾವಿಡ (ಫೀನಿಕ್ಸ್ ರವಿ)

ಕೊಲೆಗಡುಕನೊಬ್ಬ
ತನ್ನ ಅಂತ್ಯದ ದಿನಗಳಲ್ಲಿ ಬದುಕುತ್ತಾನೆ
ತಾನು ಕೊಂದ ಎಲ್ಲರೊಂದಿಗೆ

carrying fingerprintsಅವನು ಅನ್ನದ ತುತ್ತು ಬಾಯಿಗಿಡುವಾಗ
ಅವರು ಕೈ ಚಾಚುತ್ತಾರೆ
ತಮ್ಮ ರಕ್ತಸಿಕ್ತ ಬಾಯಿಗಳ ತೆರೆದುಕೊಂಡು

ಕುಡಿವ ಮದ್ಯವ ತಾವೇ ಹೊತ್ತು ತರುತ್ತಾರೆ
ಬಟ್ಟಲಲಿ ಬೆರಳಾಡಿಸುತಾ ಸುರಿಯುತ್ತಾರೆ
ಬಟ್ಟಲು ಒಡೆದ ಬಳಿಕ
ತಮಗೆ ತಾವೇ ಇರಿದುಕೊಂಡು
ಸುತ್ತ ಕುಣಿಯುತ್ತಾರೆ
ಗೆಳೆಯನೊಬ್ಬನ ಮದುವೆ ಮೆರವಣಿಗೆಯಂತೆ

ಏಕಾಂತದ ಕತ್ತಲಲ್ಲಿ ಕತ್ತಲಾಗುತ್ತಾರೆ
ತಡವಿದಲ್ಲೆಲ್ಲ
ತುಂಡಾದ ಮುಖ ಮೂಗು ಕಣ್ಣುಗಳಾಗಿ
ಮಾತು ಬೆಳೆಸುತ್ತಾರೆ

ರಾತ್ರಿಯ ಹಾಸಿಗೆಗಳಲಿ
ಸಂಗಾತಿಗಳಾಗುತ್ತಾರೆ
ಮೈಗೆ ಮೈ ತೀಡುತ್ತಾ
ಮನಸ್ಸಿನಾಳದಲ್ಲೆಲ್ಲೋ ಹುದುಗಿದ ನಗ್ನ ದೇಹಗಳ
ಇಲ್ಲವಾಗಿಸುತ್ತಾರೆ
ಉಳಿದ ಎಲುಬಿಗೆ ಬೆಂಕಿ ಇಕ್ಕುತ್ತಾರೆ.

 

‍ಲೇಖಕರು admin

27 November, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading