ಸಾಗರ್ ಫೋಟೊಗ್ರಫಿ ಸೊಸೈಟಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಫಲಿತಾಂಶ.
ಮಲೆನಾಡಿನ ಮಡಿಲಲ್ಲಿ ಕಾರ್ಯನಿರತರಾಗಿರುವ ಸಾಗರ ಫೋಟೊಗ್ರಫಿಕ್ ಸೊಸೈಟಿಯು 10ನೇ ರಾಜ್ಯಮಟ್ಟದ ಎರಡು ವಿಷಯಾಧಾರಿತ ಛಾಯಾಚಿತ್ರ ಸ್ಪರ್ಧೆಯನ್ನು ಯುವಜನರಿಗಾಗಿ ಇತ್ತೀಚೆಗೆ ಅಯೋಜಿಸಿದ್ದು ರಾಜ್ಯದ 15 ಜಿಲ್ಲೆಗಳಿಂದ ನೂರಾರು ಛಾಯಾಚಿತ್ರಗ್ರಾಹಕರು ಭಾಗವಹಿಸಿದ್ದು, ಅವರ 120 ಚಿತ್ರಗಳು ಪ್ರದರ್ಶನ ಯೋಗ್ಯವೆಂದು ಹಾಗೂ ಅವುಗಳಲ್ಲಿ ಕೆಲವೊಂದು ಬಹುಮಾನ ವಿಜೇತವೆಂದು, ಖ್ಯಾತ ಛಾಯಾ ಚಿತ್ರಕಾರ ಹಾಗೂ ಪತ್ರಕರ್ತ ಶ್ರೀ ಎಂ.ಈಶ್ವರಯ್ಯ, ಉಡುಪಿ ಅವರು ತೀರ್ಪು ನೀಡಿರುತ್ತಾರೆ.
ಬಹುಮಾನ ವಿತರಣ ಸಮಾರಂಭ ಹಾಗೂ ಛಾಯಾಚಿತ್ರ ಪ್ರದರ್ಶನವೂ ಇದೇ ನವೆಂಬರ್ 26ರಂದು ಸಾಗರದಲ್ಲಿ ನಡೆಯಲಿದೆ. ಹಾಗೂ ಪ್ರದರ್ಶನವೂ ನವೆಂಬರ್ 28ರವರೆಗೆ ತೆರೆದಿರುತ್ತದೆ. ನಂತರ ರಾಜ್ಯದ ಅನೇಕ ಸ್ಥಳಗಳಲ್ಲಿ ಪ್ರತಿವರ್ಷದಂತೆ ಈ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಸ್ಪರ್ಧೆಯ ಪಲಿತಾಂಶ ಹೀಗಿದೆ.
ಬಹುಮಾನ ವಿಜೇತರು.
ವಿಭಾಗ ೧: ಗ್ರಾಮೀಣ ಬದುಕು.
ಪ್ರಥಮ ಬಹುಮಾನ: ರಾಮು ಕುಂಜೂರು. ಉಡುಪ
ದ್ವಿತೀಯ ಬಹುಮಾನ: ಸುದೀಂದ್ರ ಎಂ.ಹಬೀಬ್, ಹುಬ್ಬಳ್ಳಿ,
ತ್ರತೀಯ ಬಹುಮಾನ: ಶ್ರವಣ ಪಿ.ಎಂ. ತಾಳಗುಪ್ಪ
ವಿಭಾಗ ೨: ಕ್ರೀಡಾಕ್ಷಣಗಳು.
ಪ್ರಥಮ ಬಹುಮಾನ: ಸಲೀಂ ಬಾಳಬಟ್ಟಿ, ಮುಂಡರಗಿ.
ದ್ವಿತೀಯ ಬಹುಮಾನ: ಎಂ ರಾಮು. ಬೆಂಗಳೂರು.
ತ್ರತೀಯ ಬಹುಮಾನ: ನಾಗರಾಜ ಟಿ ಸುರಣಗಿ. ಲಕ್ಷ್ಮಿಶ್ವರ ಗದಗ.
ಮೇಲಿನ ಎರಡು ವಿಭಾಗಗಳಿಂದ ಒಟ್ಟಾರೆ ವಿಶೇಷ ಬಹುಮಾನ
ಅತ್ಯುತ್ತಮ ಬೆಳಕಿನ ಸಂಯೋಜನ ಪ್ರಶಸ್ಥಿ : ಹೇಮನಾಥ ಪಡುಬಿದ್ರಿ. ಉಡುಪಿ.
ಅತ್ಯುತ್ತಮ ಶಾಲ ವಿದ್ಯಾರ್ಥ ಪ್ರಶಸ್ಥಿ : ಟಿ.ಎ.ಸಾರಂಗ ಸಾಗರ.
ಅತ್ಯುತ್ತಮ ಮಹಿಳಾ ಪ್ರದರ್ಶಕಿ ಪ್ರಶಸ್ಥಿ : ಹೇಮಾಶ್ರೀ. ಬೆಂಗಳೂರು.
ಪ್ರಶಂಸಾ ಪತ್ರಗಳು.
ಗ್ರಾಮೀಣ ಬದುಕು: ೧]ಹೆಚ್.ಎಸ್.ಬ್ಯಾಕೋಡ್. ಬೆಂಗಳೂರು.
೨]ಉಮಾಶಂಕರ್ ಬಿ.ಎನ್. ದೊಡ್ಡಬಳ್ಳಾಪುರ.
೩]ನಾಮದೇವ ಕಾಗದಗಾರ, ಕುರುವಟ್ಟಿ. ಬಳ್ಳಾರಿ.
೪]ವಿ.ಜಿ.ಶ್ರೀಧರ್. ಮೈಸೂರು.
ಕ್ರೀಡಾಕ್ಷಣಗಳು. ೧] ಕಾರ್ತಿಕ್ ಯಾದವ್ ಮೈಸೂರು.
೨]ತೇಜಸ್ ಕೆ.ಅರ್. ಬೆಂಗಳೂರು.
೩]ನಾಗರಾಜ್ ಜಿ. ಬೆಲ್ಲದ. ಕೊಪ್ಪಳ.
೪]ಹೇಮಾಶ್ರೀ. ಬೆಂಗಳೂರು.





ವಿಜೇತರಾದ, ಭಾಗವಹಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು…. 🙂