ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜೇಂದ್ರ ಪ್ರಸಾದ್ ಕವಿತೆ- ಮೊಣಕೈ…

ರಾಜೇಂದ್ರ ಪ್ರಸಾದ್

ನಾನೇನೋ ಸರಿಯಾಗಿಯೇ ಇದ್ದೆ
ಆದ್ರೆ ಮೊಣಕೈ ಅನ್ನೋದು ಇದೆಯಲ್ಲ
ಮೇಜಿನ ಮೇಲಣ ಗಳಾಸನ್ನ ತಗಲಿಸಿ
ಬಿದ್ದು ಒಡೆಯಿತು..
ಹಾಗೆ ಬಿದ್ದು ಚೂರಾದವುಗಳ ಸಂಖ್ಯೆ ಬಹಳಷ್ಟಿವೆ,
ಹೃದಯವನ್ನೂ ಸೇರಿಸಿಕೊಳ್ಳಬೇಕು,
ಮರೆಯದೇ..
ಶತ್ರುಗಳು ಹೊರಗಿನಿಂದ ಬರಬೇಕೆಂದಿಲ್ಲ
ನಮ್ಮೊಳಗೇ ಹುಟ್ಟಿದವಕ್ಕೆ ಲೆಕ್ಕವಿಲ್ಲ ;

ಈ ಮೊಣಕೈಯನ್ನು ಸೇರಿಸಬೇಕೋ ಬೇಡವೋ
ನೀವೇ ನಿರ್ಧರಿಸಿಕೊಳ್ಳಿ
ತಗುಲಿ ಬಿದ್ದು ಎದ್ದ ತಕರಾರುಗಳ ತಃಖ್ತೆ
ನಿಮ್ಮೊಳಗೂ ಉಂಟು ಅಸಂಖ್ಯವಾಗಿ,
ಒಮ್ಮೆ ನೋಡಿ…
ಮೊನ್ನೆ ರಾತ್ರಿ ಮಲಗುವ ವೇಳೆ
ಆಕಳಿಸುತ್ತಾ ಮೈಮುರಿದು ಹಾಸಿಗೆ ಮೇಲೆ
ಮಲಗಬೇಕು ಅಷ್ಟರಲ್ಲಿ ಮುಗಿಲಿಗೆ ಮೊಣಕೈ ತಾಗಿ
ಮಳೆಬಂತು, ದಿನಗಳಾದರೂ ನಿಂತಿಲ್ಲ,
ನನಗೀಗ ಕೈ ಕೂಡ ಎಟಕುತ್ತಿಲ್ಲ!

‍ಲೇಖಕರು Admin

23 August, 2022

1 Comment

  1. prathibha nandakumar

    ಸೂಪರ್ ರಾಜೇಂದ್ರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading