ರಾಘವೇಂದ್ರ ರಾವ್ ಕೆ
ಹಚ್ಚ ಹಸಿರಿನಲಿ
ನೀಲ ಉಡುಗೆಯ ತೊಟ್ಟ ಬೆಡಗಿ!
ನಿನ್ನ ನೋಡಲೆಂದೇ
ಕಾಯುವೆ ನಾನು ಕಾನನದಲಿ ಅಡಗಿ..
ನಡುವ ಮೇಲೆ ಕೈಯನಿರಿಸಿ
ಕಣ್ಣ ತೆರೆದು ದೃಷ್ಟಿ ಹರಿಸಿ
ಎದುರು ನಿಂತೆನ್ನ ಮನವ ಕದ್ದಿಹಳು..
ಮುಖದಲ್ಲಿ ಮಂದಹಾಸ
ನಿಲ್ಲಿಸಿಹಳು ಎನ್ನ ಶ್ವಾಸ!!
ನೋಡುತಿಹೆನು ನಾ ಎವೆಯಿಕ್ಕದೆ..

ನುಡಿಯಲವಳ ದನಿಯು ಕೋಗಿಲೆ
ಬಿರಿಯಲವಳ ಮೊಗವು ನೈದಿಲೆ
ಇವಳ ಹೆಸರ ಹೇಳು ಬಾರೆ ನವಿಲೇ..
ಚೆಲುವ ನೋಟದಲಿ ಸೆಳೆಯುತಿಹಳು
ಮನದ ಮುಗಿಲಿನಲಿ ಹಾರುತಿಹಳು
ಆಸೆ ರೆಕ್ಕೆಗಳ ಬೀಸುತಲಿ ಕರೆಯುತಿಹಳು..
ಇವಳ ಕಾಣುತಲೇs ನಲಿವೆನು
ಈಕೆಯ ಹೆಸರನೇ ಉಲಿವೆನು !
ಇವಳ ಉಸಿರಲೇ ನಾs ಬೆರೆವೆನು !!






0 Comments