ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಗ, ತಾಳ, ಪಲ್ಲವಿ ಮತ್ತು ಅನುಪಲ್ಲವಿ…

ಶಿವು ಮೊರಿಗೇರಿ

ಸಾಹಿತ್ಯಕ್ಕೆ ಶೃತಿ, ರಾಗ,ತಾಳ ಮೇಳಗಳ ಸಂಗೀತ ಸೇರಿತೆಂದರೆ ಅನುಮಾನವೇ ಬೇಡ ಅಲ್ಲಿ ತಲೆಬಾಗದವರೇ ಇಲ್ಲ. ಇಂಥಹ ಒಂದು ಪ್ರಯೋಗ ಸಮ್ಮೇಳನದ ಮೊದಲ ದಿನದ ಕಾವ್ಯ-ಗಾಯನ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಡಾ.ಕೆ.ಪಿ ಬಾಲಸುಬ್ರಹ್ಮಣ್ಯ ಕಾರ್ಯಕ್ರಮದ ಆಶಯನುಡಿಯನ್ನು ಹೇಳುತ್ತಿರುವಾಗ ಕೊಂಚ ವಿದ್ಯುತ್ ಅವಘಡದ ಗೊಂದಲ ಮುಗಿದ ತಕ್ಷಣ ವೇದಿಕೆಯಲ್ಲಿದ್ದ ಒಬ್ಬೊಬ್ಬ ಕವಿ/ಕವಯಿತ್ರಿಯರ ಒಂದೊಂದೇ ಕವಿತೆಗಳು ನರಸಿಂಹ ನಾಯಕ್, ವೈ.ಕೆ. ಮುದ್ದುಕೃಷ್ಣ, ಶ್ರೀನಿವಾಸ ಉಡುಪ, ಶ್ರೀಮತಿ ಎಸ್.ಸುನಿತ, ಶ್ರೀಮತಿ ಸೀಮಾ ರಾಯ್ಕರ್ ರ ಕಂಠಗಳಲ್ಲಿ ರಾಗಪಡೆದವೋ ಸೇರಿದ್ದ ಸಭಿಕರೆಲ್ಲ ತಲೆದೂಗಿದರು.
ಎಂ.ಎನ್.ವ್ಯಾಸರಾವ್ ರ ‘ಹಾಡಿಲ್ಲದ ನಾಡಲ್ಲಿ ಹಾಡಾಗುವ ನಾವು’, ಲಕ್ಷಿಪತಿ ಕೋಲಾರರ ‘ನವಿಲುಮರಿ ಕಿನ್ನರಿ’, ಡಾ.ಕಾ.ವೆಂ.ಶ್ರೀನಿವಾಸಮೂರ್ತಿರ, ಹರಿದಿದೆ ನೋಡಿ ಕನ್ನಡ ರಥವು’, ವಿ.ಸಿ. ಐರಸಂಗರ ‘ಸೊಗದ ಸೃಷ್ಠಿ’, ರಂಜನಿ ಪ್ರಭುರ ‘ಒಂದೇ ಒಂದು ಘಳಿಗೆಯಲ್ಲಿ’, ಬಿ. ಷಂಶುದ್ದೀನ್ ರ ‘ಬೇರಬ್ಬು’, ಡಾ.ವಿನಯಾ ಒಕ್ಕುಂದರ ‘ಹೊಸ ನದಿಯ ಹುಡುಕಿ’, ಡಾ.ಧರಣಿ ದೇವಿ ಮಾಲಗತ್ತಿಯವರ ‘ದೀಪದ ಮಲ್ಲಿ’, ಕವಿತಾಕೃಷ್ಣರ ತೇರನೇರು ಬಾ ತಾಯಿ’, ವಿಜಯ ಸಬರದರ ‘ಮನದೊಡೆಯನ ಹಾಡು’ ಕವಿತೆಗಳು ವೇದಿಕೆಯಲ್ಲಿ ಗಾಯನಗಳಾಗಿ ಕಾರ್ಯಕ್ರಮ ಮುಗಿಯುವವರೆಗೂ ಪ್ರೇಕ್ಷಕರ ಗಾರುಡಿಗರಂತಿದ್ದದ್ದು ಸುಳ್ಳಲ್ಲ.

ಕಾರ್ಯಕ್ರಮದ ಕೆಲವು ದೃಶ್ಯಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :


 

‍ಲೇಖಕರು G

8 January, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading