ರವಿ ಮೂರ್ನಾಡ್
ಮಗುವಿನ ನಿದ್ರೆ..!
ಅದು ಹೇಗೆ ಮಲಗಿದೆ ನೋಡಿ… ಅರೆಬಿರಿದ ಕಂಗಳಲಿ ಅರ್ಧ ಲೋಕವ ತೆರೆದು ! ಚಂದಮಾಮನ ಕರೆಯುತ್ತಿದೆ ಕೈಬೆರಳು !
ಹಾಗೇ ಕೇಳುತ್ತಿದೆ
ತಟ್ಟಿ ಮಲಗಿಸುವ
ಜೀಕುವ ಮರಗಳ ತೀಡನ
ಭೂಮಿಯ ತೊಟ್ಟಿಲಲ್ಲಿ
ಹಕ್ಕಿ ಚಿಲಿಪಿಲಿಯ
ಜೋಗುಳದ ಗಾನ
ಎಚ್ಚರವಿರದ ಕನಸುಗಳ
ಹಗಲು-ರಾತ್ರಿಯ ಪಯಣ
ಗಾಳಿ ಚಾಮರವಾಗಲಿ
ಸೋಕದಿರಲಿ…
ಹಾಲ್ದುಟಿಗೆ ನೋಣಗಳು !
ಆಗಸಕೆ ಸೆರಗು ಬರಲಿ !
ಮುತ್ತದಿರಲಿ..
ನಾಯಿ-ರಣಹದ್ದಿನ ಕಂಗಳು !
ಹೂವಾಗಲಿ…..
ಧೋ ಎಂದು ಸುರಿವ ಮಳೆಹನಿಗಳು
ಅವುಚಿಕೊಳ್ಳಲಿ ಭೂಮಿ !
ಬುಸುಗುಟ್ಟದಿರಲಿ ಬಿರುಗಾಳಿ !
ಹಠಮಾರಿ ಸುನಾಮಿ !
ಮಲಗಿದ ಮಗು ಮಲಗಿಯೇ ಇರಲಿ
ಬಣ್ಣವಿರಲಿ..
ಅಮ್ಮನಿಗೆ ಮಗುವಿನ ಕನಸಿರಲಿ !
]]>






ನಿಮ್ಮ ಕವನದಲ್ಲಿ ಪ್ರೀತಿಯಿದೆ,ಆರ್ದ್ರತೆ ಇದೆ ,ಅಸ್ತಕ್ಕು ಮಿಗಿಲಾಗಿ ಮಗುವಿನ ಮನಸಿದೆ. ಬಹುಷಃ ಇಡೀ ಜಗತ್ತಿನ ವಿಸ್ಮಯವೆಂದರೆ ನನಗೆ ಮಗು,ಅದರ ನಿಷ್ಕಲ್ಮಶ ಬದುಕು ,ಅದು ಬದುಕನ್ನು ತಬ್ಬಿಕೊಳ್ಳುವ ರೀತಿ ಅಲ್ಲವೇ , ನನಗೇಕೋ “ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗೋ ಮಗುವೆ ಹಾಡು ನೆನಪು ಬಂತು, ನನ್ನ ಮಗಳಿಗೆ ಈ ಹಾಡು ಕೇಳಿಸುತ್ತ,ಹಲವೊಮ್ಮೆ ಹಾಡುತ್ತ ಮಲಗಿಸುತ್ತಿದ್ದೆ.
ರವಿ ವರ್ಮ ಹೊಸಪೇಟೆ.