ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಮಝಾನ್ ಪದ್ಯಗಳು

ಬಿ ಎಂ ಬಷೀರ್

ಗುಜರಿ ಅಂಗಡಿ

ನಾನು ತುಕ್ಕು ಹಿಡಿದ ಕಬ್ಬಿಣ ಹಸಿವಿನ ಕುಲುಮೆಯಲ್ಲಿ ಧಗಿಸಿ ಹೊರ ಬಂದಿದ್ದೇನೆ ಈಗಷ್ಟೇ ಸ್ನಾನ ಮುಗಿಸಿದ ನವಜಾತ ಶಿಶುವಿನಂತೆ ಬೆಳಗುತ್ತಿದ್ದೇನೆ ಮೇಲೊಬ್ಬ ಕಮ್ಮಾರ ಬಾಗಿದ್ದೇನೆ ಅವನ ಮುಂದೆ ಉಳುವವನಿಗೆ ನೊಗವೋ ಮನೆಗೊಂದು ಕಿಟಕಿಯೋ ಬಾಗಿಲಿಗೆ ಚಿಲಕವೋ, ಬೀಗವೋ ಅಥವಾ ಧರಿಸುವುದಕ್ಕೆ ಖಡ್ಗವೋ ಎಲ್ಲಾ ಅವನ ಲೆಕ್ಕಾಚಾರ

2 ನಡು ರಾತ್ರಿ ಅತ್ತಾಳಕ್ಕೆಂದು ಮಗನ ಎಬ್ಬಿಸ ಬಂದ ತಾಯಿ ತಲ್ಲಣಿಸಿ ನಿಂತಿದ್ದಾಳೆ ಮಗುವಿನ ಗಾಢ ನಿದ್ದೆ ಅವಳಿಗೆ ಧ್ಯಾನದಂತೆ ಭಾಸವಾಗಿದೆ 3 ರಮಝಾನ್ ದಿನಗಳು ಅಮ್ಮನ ಕೆನ್ನೆಯ ಓಣಿಗಳಲ್ಲಿ ಕಣ್ಣ ಹನಿಗಳಾಗಿ ಉದುರಿ ಹೋಗುತ್ತಿವೆ ಒಬ್ಬಂಟಿ ಕುಳಿತು ಜಪಮಣಿಯಂತೆ ಅವಳದನ್ನು ಎಣಿಸುವಳು 4 ನನ್ನ ದ್ವೇಷ ಹಸಿವಿನ ಬೆಂಕಿಯಲ್ಲಿ ಬೂದಿಯಾಗಿದೆ ಏನು ಹೇಳಲಿ ಕರುಣಾಳುವಿನ ಕೃಪೆಯ? ಮಸೀದಿಯಲ್ಲಿ ಕ್ಷಮೆಯ ಉಡುಗೊರೆಯೊಂದಿಗೆ ಕಾಯುತ್ತಿದ್ದಾನೆ ಗೆಳೆಯ!]]>

‍ಲೇಖಕರು G

22 July, 2012

2 Comments

  1. D.RAVI VARMA

    ರಮಝಾನ್ ದಿನಗಳು
    ಅಮ್ಮನ ಕೆನ್ನೆಯ ಓಣಿಗಳಲ್ಲಿ
    ಕಣ್ಣ ಹನಿಗಳಾಗಿ
    ಉದುರಿ ಹೋಗುತ್ತಿವೆ
    ಒಬ್ಬಂಟಿ ಕುಳಿತು
    ಜಪಮಣಿಯಂತೆ ಅವಳದನ್ನು ಎಣಿಸುವಳು
    ತುಂಬಾ ಅರ್ಥಪೂರ್ಣವಾದ ಸಾಲುಗಳು ,ನಿಮ್ಮ ಕಾವ್ಯದ ಗತ್ತೇ ಅದು . ಅದು ಮನಸಿನಾಳಕ್ಕೆ ಇಳಿದು ,ಒಂದಿಸ್ಟು ಹೊಸ ಆಲೋಚನೆಯತ್ತ ಕೊಂಡಯ್ಯುವ ,ಗಮ್ಮತ್ತು ಇದೆ. ಹಾಗಾಗಿ ನಿಮ್ಮ ಕಾವ್ಯವನ್ನು ನಾನು ತುಂಬಾ ಪ್ರೀತಿಯಿಂದ ಓದುತ್ತೇನೆ ಅಹಾಗು ಅದರ ಮಾದುರ್ಯವನ್ನು ಸವಿಯುತ್ತೇನೆ .
    ರವಿ ವರ್ಮ ಹೊಸಪೇಟೆ

  2. mmshaik

    basir,nice one.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading