ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಜಿಯಾ ಡಿ ಬಿ ಹೊಸ ಕವಿತೆಗಳು…

ರಜಿಯಾ ಡಿ ಬಿ

1. ಅನನ್ಯ

ಕಣ್ಣಿನ ನೋಟವಾಗಿ
ಶಬ್ದದ ಅರ್ಥವಾಗಿ
ಆತ್ಮದೊಂದಿಗೆ
ಜೀವವಾಗಿ;
ಈ ಚಾಲನೆಗೆ
ಸಂಚಾಲನೆಯಾಗಿ –
ನೀ ಇಲ್ಲದೆಯೇ
ನಿನ್ನಿರುವಿನ ‘ಅರಿವು’
ಚಿಗಿಯುತ್ತಿಹುದಿಲ್ಲಿ

2. ರಿವಾಜ್

ಈಟಿ ಮಾತಿನ ಏಟಿಗೆ
ದಹಿಸಲಾಗದ ದೇಹ
ದಮನವಾಗದ ಧೋರಣೆಗೆ
ದಂಗೆ ಏಳಬಯಸುವ
ದಂಧೆಯಲ್ಲೇ –
ದಂಗಾದ ಪೋರಿಗಳು
ದಾರುಣ ರಿವಾಜಿಗೆ
ಸಿಕ್ಕು ಸಜೀವ ಗೋರಿಗಳು

3. ಅಪಹಾಸ್ಯ

ಅಮ್ಮ ಉಟ್ಟ
ಆರು ಮೊಳದ ಸೀರೆ
ಅಕ್ಕನುಟ್ಟ ಗಾರ್ಡನ್
ಸ್ಯಾರಿಯೂ- ‌
ಸುಷ್ಮಾಳು
ತೊಟ್ಟ ಸಲ್ವಾರು
ಸಾಲು ಸಾಲಾಗಿ ಬದಲಾಗುತ್ತಿದ್ದರೂ
ಬದಲಾಗಲಿಲ್ಲ
ಒಳ ಚಿಂತನೆಯಲ್ಲಿ
ಒತ್ತಿಕೊಂಡ ಹಳೆಯದೇ ಸೀಲು

‍ಲೇಖಕರು Admin

3 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading