ಮುರಳೀಧರ ಉಪಾಧ್ಯ, ಹಿರಿಯಡ್ಕ
ಅಂತರ್ಜಾಲದಲ್ಲಿ ಕನ್ನಡ ಬಳಸುವವರು , ಮುಖ್ಯವಾಗಿ ಕರ್ನಾಟಕ ಸರಕಾರದ ಇಲಾಖೆಗಳು ಕನ್ನಡ ಯೂನಿಕೋಡ್ ಬಳಸದಿರುವುದು , ಯುನಿಕೋಡ್ ಬಳಸಲು ಅವರಿಗೆ ಗೊತ್ತಿಲ್ಲದಿರುವುದು ನೆಟಿಜನ್ ಗಳಿಗೆ ದೊಡ್ಡ ಸಮಸ್ಯೆ. ಶ್ರೀ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ, ಸರಕಾರಿ ಇಲಾಖೆಗಳು ಕನ್ನಡ ಯೂನಿಕೋಡ್ ಬಳಸುವುದನ್ನು ಕಡ್ಡಾಯಗೊಳಿಸಿದರು.ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2013-14 ರ ಬಜೆಟ್ ನಲ್ಲಿ ಕನ್ನಡ ಯೂನಿಕೋದ್ ಗಾಗಿ ಎರಡು ಕೋಟಿ ತೆಗೆದಿಸಿದ್ದಾರೆ. ಎರಡು ತಿಂಗಳಲ್ಲಿ ಕನ್ನಡ ಯೂನಿಕೋಡ್ ಕೆಲಸ ಮುಗಿಯಲಿದೆ ಎಂದು ಕನ್ನಡ ಮತ್ತು ಸಂಸೃತಿ ಇಲಾಖೆ ಕಾರ್ಯದರ್ಶಿಯವರು 14- 7-2013 ರಂದು ಮಾಹಿತಿ ನೀಡಿದ್ದಾರೆ .. ನಿಜವೇ ? ಅಗೋಸ್ತು ಹದಿನೈದರಂದು {15-8-2013 } ಕನ್ನಡ, ಯೂನಿಕೋಡ್ ಸಮಸ್ಯೆಯಿಂದ ಬಿಡುಗಡೆ ಪಡೆಯಲಿದೆಯೇ ?

ಆಂದ್ರ ಪ್ರದೇಶ ಯೂನಿಕೋಡ್ ನ [ Unicode consortiaum ] ಸದಸ್ಯತ್ವ ಪಡೆದಿದೆ. { ತೆಲುಗು ವಿಕೀಪೀಡಿಯ ಕನ್ನಡ ವಿಕಿಗಿಂತ ತುಂಭಾ ಮುಂದಿದೆ. ] ಕರ್ನಾಟಕ ಸರಕಾರದ ಅಧಿಕಾರಿಗಳು ಇದುವರೆಗೆ ಯೂನಿಕೋಡ್ ಸದಸ್ಯತ್ವದ ಕುರಿತು ಯೋಚಿಸಿದಂತಿಲ್ಲ . ಯೂನಿಕೋಡ್ ಸಂಸ್ಥೆಯ ಸದಸ್ಯನಾಗಲು ಕರ್ನಾಟಕ ಸರಕಾರ ವಾರ್ಷಿಕ 18000$ [ ರೂ.10,80000 ] ಪಾವತಿ ಮಾಡಬೇಕು.. ಆದರೆ ಯೂನಿಕೋಡ್ ಸದಸ್ಯತ್ವ ಪಡೆದೊಡನೆ ಅಂತರ್ಜಾಲದಲ್ಲಿ ಕನ್ನಡ ಪವಾಡ ನಡೆಯುವುದಿಲ್ಲ. ಕನ್ನಡ ಲಿಪಿ ಬಳಸುವ ತುಳು , ಕೊಡವ , ಬ್ಯಾರಿ , ಕೊಂಕಣಿ ಭಾಷೆಯಳಿಗೂ ಅನುಕೂಲವಾಗುವಂತೆ ಕನ್ನಡ ಯೂನಿಕೋಡ್ ಪರಿಷ್ಕರಿಸಬೇಕು .ಸರಕಾರಿ ಇಲಾಖೆಗಳ ವೆಬ್ ಸೈಟ್ ಗಳಿಗೆ ಕನ್ನಡ ಯೂನಿಕೋಡ್ ಬಳಸಿ ಮಾಹಿತಿ ಸೇರಿಸುವ ಕೆಲಸ ಆಗಬೇಕಾಗಿದೆ .ಇದು ನಿರಂತರ ಆಗುತ್ತಿರಬೇಕಾದ ಕೆಲಸ.
ಕನ್ನಡದ ಈಗಿನ ದುಸ್ಥಿತಿ ನೋಡಿ – ಗೂಗುಲ್ ಹಿಂದಿ ಮತ್ತು ಇತರ ಕೆಲವು ಭಾರತೀಯ ಭಾಷೆಗಳಲ್ಲಿ ಸುದ್ದಿ ಹುಡುಕುವ { News search ] ಸೌಲಭ್ಯ ನೀದುತ್ತಿದೆ. ಆದರೆ ಕನ್ನಡದಲ್ಲಿ ನೀಡುತ್ತಿಲ್ಲ. ನೀವು ’ ಕರ್ನಾಟಕ ಸರಕಾರ ’ ಎಂದು ಕನ್ನಡದಲ್ಲಿ ಹುಡುಕಿದರೆ ಕರ್ನಾಟಕ ಸರಕಾರದ ವೆಬ್ ಸೈಟ್ ಸಿಗುವುದಿಲ್ಲ . ಆದರೆ ಗೂಗುಲ್ ಬ್ಲಾಗರ್ ಯೂನಿಕೋಡ್ ಬಳಸುತ್ತಿರುವುದರಿಂದ ನನ್ನ ಹೆಸರನ್ನು ಕನ್ನಡದಲ್ಲಿ ಬರೆದು ಹುಡುಕಿದರೆ http://mupadhyahiri.blogspot.in [ ಸಖೀಗೀತ ] ಎಂಬ ನನ್ನ ಬ್ಲಾಗ್ ಸಿಗುತ್ತದೆ.
ಬಜೆಟ್ ನಲ್ಲಿ ಕನ್ನಡ ಯೂನಿಕೋಡ್ ಗೆ ನೀಡಿರುವ ನಿಧಿ ಹೆಚ್ಚಾಯಿತೇ ? ಕಮ್ಮಿ ಆಯಿತೇ ?. ಕರ್ನಾಟಕ ಸರಕಾರ ಯೂನಿಕೋಡ್ ಸದಸ್ಯತ್ವ ಪಡೆಯುವುದು ಯಾವಾಗ ? ಕನ್ನಡ ಯೂನಿಕೋಡ್ ಬಳಕೆಯಲ್ಲಿ ಆಗಬೇಕಾದ ತುರ್ತು ಕೆಲಸಗಳು ಯಾವುವು ? ಕನ್ನಡ ಲೇಖನಗಳನ್ನು ಅಂತರ್ಜಾಲದಲ್ಲಿ ಇನ್ನೊಬ್ಬರಿಗೆ ಕಳುಹಿಸುವಾಗ ಯುನಿಕೋಡ್ ಗೆ ಬದಲಾಯಿಸುವ ಸುಲಭ ಉಪಾಯಗಳೇನು ? ಬಿ.ಎಸ್ ಸಿ ಕಂಪ್ಯೂಟರ್ ವಿದ್ಯಾರ್ಥಿಗಳಿಗೆ , ಕನ್ನಡ ಐಚ್ಚಿಕ ವಿದ್ಯಾರ್ಥಿಗಳಿಗೆ ಕನ್ನಡ ಕಂಪ್ಯೂಟರ್ ಕಲಿಕೆ ಕಡ್ಡಾಯಗೊಳಿಸಲು ಇದು ಸಕಾಲವಲ್ಲವೇ ? [ ಕನ್ನಡ ಗೊತ್ತಿಲ್ಲದ ಬಿ.ಎಸ್.ಸಿ ವಿದ್ಯಾರ್ಥಿಗಳಿಗೆ ಬೇರೆ ವಿಷಯದ ಆಯ್ಕೆ ನೀಡಬಹುದು .]
ಯೂನಿಕೋಡ್ ಎಂದರೆ ಏನು ಎಂದು ಗೊತ್ತಿರುವ ಅಧಿಕಾರಿಗಳು ನಮ್ಮ ಸರಕಾರಿ ಇಲಾಖೆಗಳಲ್ಲಿ ಎಷ್ಟು ಮಂದಿ ಇದ್ದಾರೆ ? ಈ ಬಗ್ಗೆ ಒಂದು ಸಂವಾದವನ್ನು ನಡೆಸಿ ಕರ್ನಾಟಕ ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಕನ್ನಡ ಕಂಪ್ಯೂಟರ್ ಪರಿಣತರು ಮಾಡಬೇಕೆಂದು ವಿನಂತಿಸುತ್ತೇನೆ.






Priya Muralidhar
Tweeter muulaka, patrikegala muulaka vishayavannu innashtu prasaara maaduvudu haagu neeravaagi sarakaarada gamanakke padee padee taruvudu agatyvaagide. Namma gamanakke tandiri dhanyavaadagalu. nanna patrikeyalli (mundina sanchikeyalli) prakatisutteene.
ಮಾನ್ಯ ಮುರಳೀಧರ ಉಪಾಧ್ಯಾಯರಿಗೆ ನೀವು ಪ್ರಸ್ತುತಪಡಿಸಿದ ವಿಷಯವನ್ನು ಕನ್ನಡ ನೆಟ್ಟಿಗರೆಲ್ಲ ಸಾರ್ವಜನಿಕ ಹಿತಾಸಕ್ತಿಯ ವಿಷಯವನ್ನಾಗಿ ಮಾಡಿ ಸರಕಾರಕ್ಕೆ ಮನವಿಯನ್ನು ಯಾಕೆ ಕೊಡಬಾರದು? ಚಂದ್ರಶೇಖರ ದಾಮ್ಲೆಯವರು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಕುರಿತಾಗಿ ಶಿಕ್ಷಣ ಮಂತ್ರಿಗೆ ಅಹವಾಲು ನೆಟ್ ಮೂಲಕ ನಮ್ಮೆಲ್ಲರ ಸಹಿಯೊಂದಿಗೆ ಸಲ್ಲಿಸಿದ್ದರು.ಹಾಗೊಂದು ಪ್ರಯತ್ನ ನೀವು ಮಾಡಿದರೆ ನಾವೆಲ್ಲ ಸೈನ ಮಾಡಬಹುದು. ಉದಯಕುಮಾರ ಹಬ್ಬು, ಕಿನ್ನಿಗೋಳಿ
ನೀವು ಬರೆದಿರುವುದು ನಿಜ. Date update ಆದಂತೆ ತಂತ್ರಾಂಶ-ಯಂತ್ರಾಂಶ-ಮನುಜರು-ಸರ್ಕಾರಗಳು ಎಲ್ಲರೂ update ಆಗಲೇಬೇಕು. ಇಲ್ಲವಾದರೆ ಕೊಳೆತ ಜೀವಿಗೆ ಸಮವಾದಂತೆ. ನಮ್ಮ ಸರ್ಕಾರದಲ್ಲಿರುವವರು ತಮ್ಮ ಸೌಲಭ್ಯಕ್ಕಾಗಿ update ಆಗುತ್ತಾರೆಯೇ ಹೊರತು ತಮ್ಮ ಉಳಿವಿಗೆ ಕಾರಣವಾಗಿರುವ ಭಾಷೆ ಮತ್ತು ಭಾಷಿಕರ ವಿಷಯದಲ್ಲಿ update ಆಗುವುದೇ ಇಲ್ಲ. ಖಾಸಗಿಯಾಗಿ ಹವ್ಯಾಸಿ ತಂತ್ರಜ್ಞರು ಮಾಡಿರುವಷ್ಟೂ ಸಹ ಈ ನಮ್ಮ ಸರ್ಕಾರ ನಮ್ಮ ತಂತ್ರಾಂಶಕ್ಕಾಗಿ ಮಾಡದೇ ಇರುವುದು ನಮ್ಮ ಭಾಷಿಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ತೊಡಕಾಗಿದೆ.