ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯು ಬಿ ಪವನಜ ತೇಜಸ್ವಿ ಬಗ್ಗೆ…

ತೇಜಸ್ವಿ ನನಗೆ ತುಂಬ ಇಷ್ಟವಾದುದು ಅವರು ವಿಜ್ಞಾನ ಸಾಹಿತ್ಯ ಬರೆದುದಕ್ಕೆ ಮತ್ತು ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ಅವರಿಗಿದ್ದ ಆಸಕ್ತಿಗೆ. ಮೂಡಿಗೆರೆಯ ಅವರ ಮನೆಗೆ ಎರಡು ಬಾರಿ ಭೇಟಿ ನೀಡಿದ್ದು ಇನ್ನೂ ನೆನಪಿನಲ್ಲಿದೆ. ತೇಜಸ್ವಿಯವರ ವಿಜ್ಞಾನ ಸಾಹಿತ್ಯ ಸೃಷ್ಠಿಯ ಬಗ್ಗೆ ಆಗಾಗ ಪ್ರಸ್ತಾಪಿಸುತ್ತಿರುತ್ತೇನೆ.
pavanaja5ಮುಖ್ಯವಾಗಿ ಕನ್ನಡ ಮಾಧ್ಯಮ ಮತ್ತು ಇಂಗ್ಲಿಶ್ ಮಾಧ್ಯಮದ ಬಗ್ಗೆ ಚರ್ಚೆ ಬಂದಾಗ. ಒಂದನೆ ತರತಿಯಿಂದಲೆ ಇಂಗ್ಲಿಶ್ ಮಾಧ್ಯಮದ ಅಗತ್ಯದ ಬಗ್ಗೆ ಪ್ರತಿಪಾದಿಸುವವರ ಒಂದು ಪ್ರಮುಖ ವಾದವೆಂದರೆ ಕನ್ನಡ ಮಾಧ್ಯಮದಲ್ಲಿ ಕಲಿತರೆ ಪ್ರಪಂಚದ ಇತ್ತೀಚೆಗಿನ ಜ್ಞಾನ, ಮುಖ್ಯವಾಗಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ್ದು, ದೊರಕುವುದಿಲ್ಲ; ಆದುದರಿಂದ ಒಂದನೆ ತರಗತಿಯಿಂದಲೇ ಇಂಗ್ಲೀಶಿನಲ್ಲಿ ಕಲಿಯಬೇಕು ಎಂದು. ಇದಕ್ಕೆ ಪರಿಹಾರ ಕನ್ನಡದಲ್ಲಿ ಪ್ರಪಂಚ ಜ್ಞಾನ ತರುವುದೇ ವಿನಾ ಒಂದನೇ ತರಗತಿಯಿಂದ ಇಂಗ್ಲೀಶಿನಲ್ಲಿ ಕಲಿಯುವುದಲ್ಲ.
ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಬರೆದ ಕೆಲವೇ ಕೆಲವು ಸಾಹಿತಿಗಳಲ್ಲಿ ತೇಜಸ್ವಿ ಒಬ್ಬರು. ಇನ್ನೊಬ್ಬ ಪ್ರಮುಖರು ಶಿವರಾಮ ಕಾರಂತರು. ಇವರಿಬ್ಬರ ಹೊರತಾಗಿ ವಿಜ್ಞಾನ ಸಾಹಿತ್ಯ ಬರೆದವರೆಲ್ಲ ವಿಜ್ಞಾನಿಗಳು ಆಥವಾ ವಿಜ್ಞಾನದಲ್ಲಿ ಪದವಿ ಪಡೆದವರು. ಇಂತಹವರ ಸಂಖ್ಯೆ ಖಂಡಿತ ಹೆಚ್ಚಾಗಬೇಕು.

‍ಲೇಖಕರು avadhi

4 April, 2009

1 Comment

  1. Dr. BR. Satyanarayana

    ಇಂಗ್ಲಿಷ್ ವಿಷಯ ಬಂದಾಗ, ನಯನ ಸಭಾಂಗಣದಲ್ಲಿ ತೇಜಸ್ವಿ ಹೇಳಿದ್ದ ಇನ್ನೊಂದು ಮಾತು ನೆನಪಿಗೆ ಬರುತ್ತದೆ. ‘ವ್ಯವಹಾರಕ್ಕೆ ಬೇಕಾದಷ್ಟು ಇಂಗ್ಲಿಷ್ ಸಾಕು. ಅದಕ್ಕೆಲ್ಲ ಹೆಚ್ಚೆಂದರೆ ನೂರೈವತ್ತು ಇನ್ನೂರು ಇಂಗ್ಲಿಷ್ ಪದಗಳು ಸಾಕು. ಆದರೆ ಅಷ್ಟನ್ನೂ ಕಲಿಸಬಲ್ಲ ಮೇಷ್ಟ್ರು ನಮ್ಮಲ್ಲಿಲ್ಲ!’ ಎಂದಿದ್ದರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading