
ಸವಿತಾ ನಾಗಭೂಷಣ
ಹೊಡೆದಾಡಲು
ಕೋಟಿ ಕೋಟಿ ಹಣ
ಖರ್ಚು ಮಾಡಬೇಕೆ?
ಕಾದಾಡಿ
ಕೋಟಿ ಕೋಟಿ ಜನ
ಜೀವ ತೆರಬೇಕೇ?
ದ್ವೇಷಿಸಲು ದಮನಿಸಲು
ದೊಡ್ಡ ದೊಡ್ಡ ಯೋಜನೆ
ಹಾಕಿಕೊಳ್ಳಬೇಕೇ?
ಒಡವೆ ವಸ್ತುಗಳಂತೆ
ಮದ್ದು ಗುಂಡುಗಳನ್ನು
ಸಂರಕ್ಷಣೆ ಮಾಡಬೇಕೇ?
ಯಾಕೋ ಮನುಜರು
ಅನ್ನ ತಿನ್ನುವವರಂತೆ ಕಾಣುತ್ತಿಲ್ಲ
ಅವರು ಪ್ರಶ್ನೆಗಳನ್ನು ಕೇಳುತ್ತಿಲ್ಲ
ಬದುಕಿಲ್ಲ …ಸತ್ತಿಲ್ಲ….





ಒಂದು ಊರಲ್ಲಿ, ಒಂದು ಬೀದಿಯಲ್ಲಿ ಮೂರ್ನಾಲಕ್ಕು ಪಾರ್ಟಿಗಳಿರುವಾಗ ಇಡೀ ಪ್ರಪಂಚಕ್ಕೆ ಇನ್ನು ಎಷ್ಟು ಪಾರ್ಟಿಗಳು, ಸರ್ಕಾರಗಳು,ಮನೋಭಾವಗಳು ಇರಬಹುದು ಲೆಕ್ಕಹಾಕಿ.
ಇವರನ್ನೆಲ್ಲಾ ‘ವಿಶ್ವಮಾನವತೆ’, ‘ಶಾಂತಿ’,ಸೌಹಾರ್ದ್ಯ’, ‘ಪ್ರೀತಿ’ ಎಂಬ ಒಂದೇ ಛತ್ರಿಯಿಡಿ ತಂದು ನಿಲ್ಲಿಸುವುದು ಕನಸಿನಮಾತು. ಸುಮ್ಮನೆ ಸಭೆ,ಸಮಾರಂಭಗಳಲ್ಲಿ ಆ ಪದಗಳನ್ನು ಭಾಷಣಗಳ ಮಧ್ಯೆ ಸೇರಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದೇ ಹೊರತು ವಾಸ್ತವದಲ್ಲಿ ಆಗದ ಹೋಗದ ಮಾತು.
ತುಂಬಾ ಚೆನ್ನಾಗಿದೆ ಕವಿತೆ
kavite tumba channagide