ಹೊಸ ಯುಗಾದಿ…
ಸುಚಿತ್ರಾ ಕೆ ಮಂಗಳೂರು
ಅಮ್ಮ..
ಯುಗಾದಿ ಬರುತ್ತಿದೆ
ಹೊಸ ವರುಷ ಹೊಸ ಹರುಷ
ಹೊಸತನವೇ ಇಳೆಗೆ ಮೆರುಗು ತರುತ್ತಿದೆ
ಪ್ರತಿ ವರುಷವು ಬರುತ್ತಿದೆ ಮಗಳೇ…
ಹರಕಲು ಸೀರೆೆ,
ಅದೇ ತೂತು ಪಾತ್ರೆ
ಅದರಲ್ಲೇ ಸವಿಯೋಣ ಹೊಸತನ
ಅಮ್ಮ ಯುಗಾದಿ ಬರುತ್ತಿದೆ
ಹೊಸ ಹುರುಪು ಹೊಸ ನುಣುಪು
ಹೊಸತನದ ತಂಗಾಳಿ ಬೀಸಿದೆ
ಪ್ರತಿ ವರುಷವು ಬರುತ್ತಿದೆ ಮಗಳೇ…
ಹೊಳಪಿಲ್ಲದ ಕಂಗಳ
ಅಸಹಾಯಕ ನಿಟ್ಟುಸಿರಿನ ಬಿಸಿಗಾಳಿ
ಅದರಲ್ಲೇ ಕಾಣೋನ ಹೊಸತನ
ಅಮ್ಮ ಯುಗಾದಿ ಬರುತ್ತಿದೆ
ಸಿಹಿ-ಕಹಿ ಸೇರಿ ಬಾಳು ಸಿಹಿಜೇನು
ಬೇವು-ಬೆಲ್ಲವ ಬೆರೆತ ಕಷ್ಟ-ಸುಖ
ಪ್ರತಿ ವರುಷವು ಬರುತ್ತಿದೆ ಮಗಳೇ…
ಕಹಿಯನ್ನೇ ನಾವುಂಡು ಸಿಹಿಯ ನಗೆಯಲಿ
ಕಷ್ಟವ ಸಹಿಸಿ ಸುಖವ ಹುಡುಕುವೆವು…
.ಅದರಲ್ಲೇ ಹುಡಕೋಣ ಹೊಸತನ….
ಅಮ್ಮ ಯುಗಾದಿ ಬರುತ್ತಿದೆ
ಭೇದ -ಭಾವ ಮರೆತ ಜೀವಗಳ ಬೇಸುಗೆ
ನಕ್ಕು ನಲಿದು ಸಂತೋಷದಿ ಮೆರೆವ ಹೊಸ ದಿನ
ಪ್ರತಿ ವರುಷವು ಬರುತ್ತಿದೆ ಮಗಳೇ…
ಒಂದರೆಗಳಿಗೆ ವೇಷ ತೊಟ್ಟ ಮನಸ್ಸುಗಳು
ಮತ್ತೇ ಅದೇ ದ್ವೇಷ -ಅಸೂಯೆ,
ನಾವು-ನೀವು ಎನ್ನುವ
ಕಪಟದ ಮುಖಗಳ ಪ್ರದರ್ಶನ…
ಮತ್ತೇ
ಯುಗಾದಿ ಮರಳಿ ಬರುತ್ತಿದೆ ಮಗಳೇ…
ಈವರೆಗೂ ಹೊಸ ಹಗಲು ಮೂಡದ
ಇನ್ನಾದರೂ…
ಕಣ್ಗಳ ಹೊಳಪು, ಜೀವನದ ಹೊಸತನ
ಭೇದ ಮರೆತ ಮನಸ್ಸುಗಳ ಬೇಸುಗೆಯ
ಜೊತೆ ಸೇರಿ ನಲಿವ
ಯುಗಾದಿಯ…
ನಿರೀಕ್ಷೆಯ…
ಹೊಸ ಯುಗಾದಿ…
ಬರವುದೋ ಅಮ್ಮ…..
ಮರಳಿ ಬರುವುದೋ ಅಮ್ಮ……







kaviteyallina nireekshe chennaagide.-smitha