ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರು ಕೊಟ್ಟರೊ ನಿನಗೀ ಕಡಗೋಲು..

sangeeta kalmane

ಸಂಗೀತಾ ಕಲ್ಮನೆ 

waves2ಯಾರು ಕೊಟ್ಟರೊ ನಿನಗೀ ಕಡಗೋಲು
ಸರಬರ ಸರಬರ ಕಡೆದೂ ಕಡೆದೂ
ನೊರೆಯುಕ್ಕುಕ್ಕಿ ಆಕಾಶಕ್ಕೆ ನೆಗೆಯುವೆ
ಸುನಾಮಿಯ ಅಲೆಗಳಂತೆ ಭಯ ಹುಟ್ಟಿಸುವೆ.

ಅಟ್ಟಿಸಿಕೊಂಡು ಬರುವೆ ಹತ್ತಿರ ಬಂದರೆ
ಅಟ್ಟಹಾಸದಿ ಅಟ್ಟುವೆ ಹೋಗಾಚೆ ದೂರ
ತಿರಸ್ಕಾರದ ನೋಟ ಧಿಮಾಕಿನಲ್ಲಿ
ನನಗೇನೂ ಬೇಕಾಗಿಲ್ಲ ಎಂಬಂತೆ.

ಅದೆಷ್ಟು ಕ್ರೋದವುಕ್ಕುಕ್ಕಿ ದಡಕ್ಕಪ್ಪಳಿಸಿ
ಕೈಗೆ ಸಿಕ್ಕಿದ್ದೆಲ್ಲ ಬಾಚಿಕೊಳ್ಳುವೆ ಅಜಾನು ಬಾಹು ಚಾಚಿ
ಯಾರಿಗೂ ಕೊಡೋದಿಲ್ಲ ಎಲ್ಲ ನನಗೇ ಬೇಕು ಎಂಬಂತೆ
ಮತ್ತದೆ ಎಲ್ಲ ದೂರ ತಳ್ಳಿ ಬಿಡುವೆ ವೈರಾಗಿಯಾಗಿ.

ದೀರ್ಘ ಉಸಿರನು ಎಳೆದು ನಾಭಿ ಕಚ್ಚಿಕೊಂಡಂತೆ
ಬಿಡುವೆ ಗಾಳಿಯ ಚಂಡಮಾರುತ ಅಪ್ಪಳಿಸಿದಂತೆ
ನೋಡಿದಷ್ಟಷ್ಟೂ ಕಣ್ಣು ತಣಿಯುವುದಿಲ್ಲ
ನಿನ್ನಲೆಗಳ ಆಟ ಚೆಲ್ಲಾಟ ಅಬ್ಬರದ ಸೊಗಸು.

ಶತ ಶತಮಾನಗಳೇ ಉರುಳಿದರೂ
ನಿನ್ನ ಕೆಲಸ ಸಾಗುತ್ತಲೇ ಇದೆಯಲ್ಲ
ಸುಸ್ತಾಗುವುದಿಲ್ಲವೆ ಕಡೆದು ಕಡೆದು
ಅಲೆಗಳ ಕೈ ಬಡಿದು ಬಡಿದು!

‍ಲೇಖಕರು Admin

7 March, 2016

0 Comments

Trackbacks/Pingbacks

  1. ಯಾರು ಕೊಟ್ಟರೊ ನಿನಗೀ ಕಡಗೋಲು.. | – Sandhyadeepa…. - […] http://avadhimag.online/2016/03/07/%e0%b2%af%e0%b2%be%e0%b2%b0%e0%b3%81-%e0%b2%95%e0%b3%8a%e0%b2%9f%e0%… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading