ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರಿಗೂ ಜಾಗ ಕೊಡಬೇಡ ಎದೆಯೊಳಗೆ..

ಕಟಕಟೆಯಲ್ಲಿ ನಿಂತು ಉತ್ತರಿಸುವುದು ಬಲು ಕಷ್ಟ

ಟಿ ಎಸ್ ಗೊರವರ

1
ಒಮ್ಮೊಮ್ಮೆ ಚಾಳೀಸು ಕೂಡ ಮಬ್ಬು ಕವಿಯುವದು
ಹಸಿರು ಮರ ಒಣಗಿದಂತೆ, ಒಣಗಿದ ಮರ ಹಸಿರಾಗಿ ತೋರುವುದು ;
ಯಾರಿಗೂ ಜಾಗ ಕೊಡಬೇಡ ಎದೆಯೊಳಗೆ
ಜೊತೆಗೆ ತುತ್ತು ತಿಂದವರು ಜೊತೆಗಿಲ್ಲ
feather
ಇಲ್ಲಿ ಅಚಾನಕ್ಕಾಗಿ ಒಂದೇ ಬಣ್ಣ ಬೆರಯಬಾರದು
ಆ ಬಣ್ಣ ಈ ಬಣ್ಣವೆಂದು ಹೆಸರಿಟ್ಟವರೇ ಇಲ್ಲಿ ತೀರ್ಪುಗಾರರು
ಕಟಕಟೆಯಲ್ಲಿ ನಿಂತು ಉತ್ತರಿಸುವುದು ಬಲು ಕಷ್ಟ

feather
ಅವನ ರೆಪ್ಪೆಯಲ್ಲಿ ಕಣ್ಣ ಹನಿ ತೂಗುತ್ತಿದ್ದರೆ ಒರೆಸಬಾರದು
ಜಗತ್ತು ಕುಹಕವಾಡದೆ ಸುಮ್ಮನಿರಲಾರದು
ಮರುಕ ಉಮ್ಮಳಿಸಿ ಬಂದರೂ ಮರುಗಲೇಬಾರದು
ಲೋಕದ ತುಟಿಯಲಿ ಅಂಟಿಕೊಂಡಿದೆ ವ್ಯಂಗ್ಯ
feather
ಅನುದಿನವೂ ಒಡನಾಡುವ ಕೈಗಳು
ಒಂದರ ಮೇಲೊಂದು ಸುಖಾ ಸುಮ್ಮನೆ ಕೇಸು ಹಾಕಿವೆ ;
ಕಡ ತಂದ ವಿಚಾರಗಳು ಕಸಿಗೊಂಡಿವೆ
ಒಂದರ ಪ್ರೀತಿ ಮತ್ತೊಂದರ ಅರಿವಿಗೆ ಬರುವುದೇ ಇಲ್ಲ ಇಲ್ಲಿ

feather
ಅಲ್ಲಿ ಇಲ್ಲಿ ಹರಡಿದೆ ಜಾತಿ
ಕೂಡಿ ನಡೆಯಬಹುದು ಬೆಕ್ಕು, ನಾಯಿ
ಮನುಷ್ಯ ಮನುಷ್ಯರು ಕೂಡಿ ನಡೆಯಬಾರದು ಇಲ್ಲಿ

 

‍ಲೇಖಕರು Admin

8 January, 2016

6 Comments

  1. gurusullia

    ಒಂದರ ಪ್ರೀತಿ ಮತ್ತೊಂದರ ಅರಿವಿಗೆ ಬರುವುದೇ ಇಲ್ಲ ಇಲ್ಲಿ
    ಮನುಷ್ಯ ಮನುಷ್ಯ ಕೂಡಿ ನಡೆಯಬಾರದಿಲ್ಲಿ.. ನಿಜ

  2. sangeetha raviraj

    ಚೆನ್ನಾಗಿದೆ

  3. ಶಮ, ನಂದಿಬೆಟ್ಟ

    ಎದೆಯೊಳಗೆ ಯಾರಿಗೂ ಜಾಗ ಕೊಡದೇ ಇರುವುದಾದರೆ ಬದುಕೇಕೆ ಮತ್ತೆ ??/

  4. mahadev hadapad

    channaagide

  5. Vithal Dalawai

    Khushiyaytu. . . .

  6. Madhu Biradar

    ಚೆನ್ನಾಗಿದೆ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading