-ರಾಜು ಹೆಗಡೆ
ಬೆಳದಿಂಗಳು
ಹಾಲು ಚೆಲ್ಲಿದಂತೆ ಅಲ್ಲ
ಯಾಕೆಂದರೆ
ಹಾಲು ಚೆಲ್ಲಿದರೆ
ಖುಷಿಯಾಗುವುದಿಲ್ಲ.
ಹುಡುಗಿಯರ ತುಟಿ
ತೊಂಡೆ ಹಣ್ಣಿನಂತಲ್ಲ
ಯಾಕೆಂದರೆ
ಹಣ್ಣು ತೊಂಡೆಯನ್ನು
ಯಾರೂ ಅಷ್ಟಾಗಿ
ಖಾಯಾಸು ಮಾಡುವುದಿಲ್ಲ.

ಹೌದಲ್ಲ
ಅನಿಸುವುದೆಲ್ಲ
ಹೌದಾಗಿರುವುದಿಲ್ಲ
ಯಾಕೆಂದರೆ
ಹೌದಿನ ಜತೆ
ಅಲ್ಲ ಇದೆಯಲ್ಲ!
ಹಾಗೆಯೆ
ಇದು ಕವನವಲ್ಲ
ಎನ್ನಲು ಬರುವುದಿಲ್ಲ
ಯಾಕೆಂದರೆ
ಕಾವ್ಯ ನಿಯತಿಕೃತವಾದರೂ
ನಿಯಮವಿಲ್ಲ.







ಹೌದಲ್ಲ!!! 🙂
raashi hushaarddiiri! thank u.