ನಾನು ಯಯಾತಿ…..
ಮಹಂತೇಶ್ ನವಲ್ಕಲ್
ಇಂದ್ರನಿಂದ ಬ್ರಹ್ಮದಂಡಗಳನ್ನು
ಕಡ ತಂದಿದ್ದೇನೆ ಮೈತುಂಬ ನೆಟ್ಟಿದ್ದೆನೆ
ಆಹ್ವಾನಿಸಿತ್ತಿದ್ದೇನೆ ಅಲಕ, ಶಮಾ, ದೇವಯಾನಿ, ದಾಸಿಯರು
ಇನ್ನು ತುಂಬಲೊಲ್ಲದು ಭೋಗದ ಒಡಲು
2
ಒಂದೇ ಮಾತು ಪದೆ ಪದೆ ಬದಲಾಗುತ್ತದೆ
ಪಾತ್ರಗಳು ಮಾತ್ರ ಬೇರೆ ಬೇರೆ
ನಂಬುತ್ತವೆ ಈ ಯಯಾತಿಗೆ ನಾನೊಬ್ಬಳೆ ಎಂದು
ಮದು ಇದೆ, ಮಧುರೆ ಇದೆ ಮಲಗಲು ಯೋನಿಕವಾಟದ ಹಾಸಿಗೆ ಇದೆ
ನಂಬಿಸಲು ಉರಹೊಡೆದ ಶಬ್ದಗಳಿವೆ
ಗಿಂಜಲು ಮುಖದ ಮುಗಳ್ನಗೆ ಇದೆ
ಇವು ಸಾಕುಯಯಾತಿ ಭವದಾಟಲು
3
ಪಾತ್ರಗಳು ಮಾಡಿ ಮಾಡಿ ದಣಿದಮನ
ಯಾಂತ್ರಿಕ ಕ್ರತಕಾಬಿನಯ.
ಹಲ್ಲು ಗಿಂಜಿ ಗಿಂಜಿ ಸುಕ್ಕು ಮಾಡಿಕೊಂಡ ಚರ್ಮ
ಬತ್ತಿದ ಝರಿಯಸೆಲೆ
ಶಡ್ಯಂತ್ರದ ಪ್ರಮುಖ ಪಾತ್ರದಾರಿಗಳು .ಅನ್ನುತ್ತವೆ ಅವು
ಏಸುದಿನ ಕೋತಿಕುಣಿತದಾಟ ಕೋತಿಯಾಡಿಸುವನು ಗೆಳೆಯನಲ್ಲ
ಬಂಧುವಲ್ಲ ಇಬ್ಬರದು ಕೊಡು ಕೊಳ್ಳುವಿಕೆಯ ಸಂಬಂದ ಈಗ ಎಲ್ಲ ಮುಗದಿದೆ
4
ನಾನಿನ್ನು ಸೋತಿಲ್ಲ
ಪಡುವಣದ ಒಡಲಿನಿಂದ ಪುರು ಬರುತ್ತಲಿದ್ದಾನೆ
ನನಗೆ ಶಕ್ತಿತುಂಬಲು
ಇಂದ್ರ ಪದೆ ಪದೆ ಪದೆ ಕೇಳುತ್ತಾನೆ ಇನ್ನು ಬೇಕೆ ಎಂದು
5
ಎತ್ತ ಹೋದಳು ಶಮಾ ಎತ್ತ ಹೋದಳು ದೇವಿ ಕತ್ತಲಡವಿಯಲಿ ಬಿಟ್ಟು
ಪ್ರಜ್ವಲಿಸುತಿದೆ ಜ್ಯೋತಿ ಬೆಂಕಿಯಾಗಿ
ದಹಿಸಲು ಏನು ಉಳಿದಿದೆ
ನಾನು ಎಂಬುವದೊಂದು ಗೊಂದಲಗಳ ಮದ್ಯ







ಇಷ್ಟವಾಯಿತು…