ರೇವಣಸಿದ್ದಪ್ಪ ಜಿ ಆರ್
ನಿತ್ಯ ತನ್ನ ಸುತ್ತ ಸುತ್ತುತ್ತಾ
ಸೂರ್ಯನ ಸುತ್ತುವ
ಭೂಮಿ ಮಾಡುವ ಸರ್ಕಸ್ಸು;
ವರ್ಷಂಪ್ರತಿ ಅದೇ ಋತುಚಕ್ರ;
ಸಂಬಂಧಗಳ ಸಂಕೋಲೆಯಲ್ಲಿ
ಕೊಡುಕೊಳ್ಳುವ ಮಾಮೂಲಿ ವ್ಯಾಪಾರ.
ಹಗಲಲ್ಲಿ ಬೆಳಗುವ ದಿನಕರ;
ಇರುಳಲ್ಲಿ ತಂಪೆರೆಯುವ ತಂಗದಿರ.

ಆಟ ಶುರುವಿಟ್ಟಂದಿನಿಂದ
ರಂಗಮಂಚದ ಮೇಲೆ
ಇದೇ ನೆರಳು ಬೆಳಕಿನ ಮಾಯೆ.
ಬೇರೆ ಆಡಿದುದಿಲ್ಲ;ಬೇರೆ ಆಡಲಿಕ್ಕಿಲ್ಲ.
ಒಲ್ಲೆನೆಂದರೂ…
ಬೇರೆ ಹೋಗುವುದೆಲ್ಲಿಗೆ?
ಬಂದುದಾಗಿದೆ,ಬಾಳಬೇಕಿದೆ
ಇಹದ ನಿಯಮವ ಮೀರದೆ!






0 Comments