– ಎಚ್ ಕೆ ಶರತ್
ಸೌಂದರ್ಯ
ಸಕಲವೂ ಸುಂದರವಾದ ಊರಲ್ಲಿ,
ಸೌಂದರ್ಯ ಪ್ರಜ್ಞೆಯ ಪರಿಚಯ
ಸಾರ್ವಜನಿಕ ಶೌಚಾಲಯಕ್ಕೆ ಮಾತ್ರ ಇತ್ತು.

ಅಮಲು
ಎಲ್ಲವೂ ಸರಿ ಇಲ್ಲದ
ಬಾರ್ನಲ್ಲಿ
ಅಮಲು
ದುರಸ್ಥಿ ಕಾರ್ಯ ಕೈಗೊಂಡಿತ್ತು.
ಬದುಕು
ಮೌನ ತೊರೆದ ಊರು
ರಾಗ ಬದಲಿಸುತ್ತಲೇ ಇತ್ತು.
ಹಾಡು ಮಾತ್ರ ಅದೇ.
ಶುರುವಿನಲ್ಲಿ ಸಂಭ್ರಮ, ಕೊನೆ ಸಾಲಲ್ಲಿ ಸೂತಕ.
ಮೌನ
ಮಾತು ಮಾತಿಗೂ
ಮೂಗುದಾರ ತೊಡಿಸಲು ಹೊರಟವನ
ಎದೆಯಲ್ಲಿ
ಮಾತಾಗದ ಭಾವಗೀತೆಗಳು ಬಿಕ್ಕುತ್ತಿವೆ.






cennaagive..sharath
very nice