ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮೌನಕ್ಕೆ ಕೇಳುವ ಕಿವಿಯೇ ಇರಲಿಲ್ಲ…’ – ಭಾರತಿ ಕವಿತೆ

– ಭಾರತಿ ಬಿ ವಿ

ಮಾತನು ಮೌನದೊಡನೆ

ಮಾತಾಡಲು ಬಿಟ್ಟೆ –

ಮೌನ ಗೆದ್ದಿತು,

ಮಾತು ಸೋತಿತು ;

ತಿರು ತಿರುಚಿ ಪದಗಳ

ಮೌನದ ಪಾದದಡಿ ಇಟ್ಟೆ –

ಕವಿತೆಯಾಗಿಸಿದೆ

ಮಹಾಕಾವ್ಯವಾಗಿಸಿದೆ ;

ಮೌನ ಕರಗಿ

ಮಾತಾಗಲೇ ಇಲ್ಲ

ಏಕೆಂದರೆ ಮೌನಕ್ಕೆ

ಕೇಳುವ ಕಿವಿಯೇ ಇರಲಿಲ್ಲ

ಹಾಗಾಗಿ ದನಿಯೂ ಇರಲಿಲ್ಲ …

]]>

‍ಲೇಖಕರು G

24 June, 2012

1 Comment

  1. mmshaik

    nice poem …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading