ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೋಸದ ದುನಿಯಾದಲಿ..

ಗಜಲ್

ಮುತ್ತು ಬಳ್ಳಾ ಕಮತಪುರ

ಮೋಸದ ದುನಿಯಾದಲಿ ಸತ್ಯವಂತರ ಕಾಲವಲ್ಲ ಗೆಳೆಯಾ
ಬಣ್ಣದ ಜಗತ್ತಿನಲ್ಲಿ ಮಹಾ ಪುಣ್ಯವಂತರ ಕಾಲವಲ್ಲ ಗೆಳೆಯಾ

ಮಾಯಾನಗರಿ ತುಂಬೆಲ್ಲಾ ವೇಷ ಬದಲಿಸುವವರು ತುಂಬಿದೇಕೆ
ಪ್ರಾರ್ಥನೆ ಅಸ್ತ್ರವಾಗಿ ಬಳಸುವರು ಗುಣವಂತರ ಕಾಲವಲ್ಲ ಗೆಳೆಯಾ

ಸುಖದ ಬದುಕಿನಲಿ ಹುಳಿ ಹಿಂಡುವ ದುರುಳ ಬುದ್ಧಿಯ ಜನರೇ
ಮತಿಹೀನರ ಜೊತೆಗೆ ತರ್ಕವಾದ ಬುದ್ಧಿವಂತರ ಕಾಲವಲ್ಲ ಗೆಳೆಯಾ

ಗೆಲುವಿಗೆ ಇಲ್ಲ ಸಲ್ಲದ ಕಥೆಗಳ ಸೃಷ್ಟಿಸಿ ಮೂಲವನ್ನೇ ಮರೆತಿದ್ದಾರೆ
ಅಂಗೈಯಲ್ಲಿ ಆತ್ಮವನ್ನೇ ಪೂಜಿಸುವ ಲಿಂಗವಂತರ ಕಾಲವಲ್ಲ ಗೆಳೆಯಾ

ಮುತ್ತು ಪ್ರೀತಿ ಹುಡುಕಲು ಕದಳಿವನ ಸುತ್ತಿ ಮತ್ತೇ ನಿನ್ನ ಸನ್ನಿಧಿಯಲ್ಲಿ
ಆಲಯದ ಬೆಳಕು ಉಣಬಡಿಸುವ ಜ್ಞಾನವಂತರ ಕಾಲವಲ್ಲ ಗೆಳೆಯಾ

‍ಲೇಖಕರು Admin

23 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading