– ರ೦ಜಿತ್ ಅಡಿಗ
ನೀಲಿ ಹೂವು ಆವಿಗಣ್ಣಿಂದ ಮೋಡವೊಂದು ಹನಿಯಾಗಲು ನಿರಾಕರಿಸಿದಂತೆ ಒಂದು ದುಃಖ ಹಾಗೇ ನಿಂತಿತು ಎದೆಯ ಹೊಸ್ತಿಲಲ್ಲ ಕಂಬನಿಯಾಗದೇ
ಅವ್ವ ಆದರೆ ಈರುಳ್ಳಿ ಹಚ್ಚುತ್ತಾಳೆ
ಚಿಟ್ಟೆ ರೆಕ್ಕೆ ಬಡಿಯುತ್ತೆ ಹುಚ್ಚುಚ್ಚಾಗಿ
ಮೇಷ್ಟರಿಗೆ ಮೇಜು
ಕಲಹಪ್ರಿಯರಿಗೆ ಗಾಜು
ಒಡೆವುದೇ ಮೋಜು
ಇಂಥ ಸಮಯದಲ್ಲಿ ಮಾತು ಅಸಹ್ಯ
ಮೌನ ಅಸಹನೀಯ
ಧ್ಯಾನ ಅಂದರೆ ಕೊಂಚ ಕೊಂಚವಾಗಿ
ನಶಿಸುವುದು
ಕವಿತೆ ಬರೆವುದು ಆತ್ಮಹತ್ಯೆ.
ಕವಿ ಅಂದಂತೆ ಆಕಾಶ ಮಡಚಿ
ಜೇಬಿನಲ್ಲಿ ಇಟ್ಟುಕೊಳ್ತಾನಾದರೆ ನಾನೂ
ಹಸನ್ಮುಖಿಯಾಗುವೆ ನನ್ನ ಹುಡುಗಿ
ಹಸೆಯೇರುವಾಗ
ಇಷ್ಟಕ್ಕೆಲ್ಲಾ ಅಳ್ತಾರೇನೋ
ಗಂಡಸಾಗಿ
ಅಂದಾಗ ಮಾತ್ರ ಅವಳ
ಸಾಂತ್ವನಕ್ಕೆ ಬರೆ ಕೊಡುವಂತೆ
ಆವಿಗಣ್ಣಲ್ಲಿ
ಆಕೆಯನ್ನೇ ನೋಡುತ್ತೇನೆ..]]>







0 Comments