ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊಬೈಲ್ ಗೆ ಬಂದ ಈ ಎಸ್ಎಂಎಸ್

ಇತ್ತೀಚೆಗೆ ನನ್ನ ಮೊಬೈಲ್ ಗೆ ಬಂದ ಈ ಎಸ್ಎಂಎಸ್ ತುಂಬಾ ಇಷ್ಟವಾಯಿತು.

ನಿಮಗೂ ಹಿಡಿಸಬಹುದು ಎಂಬ ಕಾರಣಕ್ಕೆ ಇಲ್ಲಿ ಅದನ್ನು ಯಥಾವತ್ ನೀಡಿದ್ದೇನೆ…
-ಎಂ.ಎಲ್. ಲಕ್ಷ್ಮೀಕಾಂತ್
digging4
ಹಳ್ಳಿಯಲ್ಲಿದ್ದ ಬಡ ರೈತ ಜೈಲಿನಲ್ಲಿರುವ ತನ್ನ ಮಗನಿಗೆ ಒಂದು ಪತ್ರ ಬರೆಯುತ್ತಾನೆ- ಈ ವರ್ಷ ನಾನೂ ಆಲೂಗಡ್ಡೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ನೆಲದ ಗುಳಿ ಹೊಡೆಯಲು ನನ್ನಿಂದ ಆಗುತ್ತಿಲ್ಲ. ಒಂದು ವೇಳೆ ನೀನು ಜೈಲಿನಲ್ಲಿ ಇಲ್ಲದೆ ನನ್ನ ಜತೆ ಇದ್ದರೆ ಆ ಕೆಲಸ ಸುಲಭವಾಗುತ್ತಿತ್ತು.  
ಇದಕ್ಕೆ ಜೈಲಿನಿಂದಲೇ ರೈತನ ಮಗ ಉತ್ತರ ಕೊಡುತ್ತಾನೆ- ದಯವಿಟ್ಟು, ನೆಲ ಅಗೆಯಬೇಡ. ಅದರಲ್ಲಿ ನಾನು ಗನ್ ಗಳನ್ನು ಹೂತಿಟ್ಟಿದ್ದೇನೆ.
ಮರುದಿನವೇ ಪೊಲೀಸರ ದಂಡು ಬಂದು ಆ ಬಡ ಕೃಷಿಕನ ಜಮೀನನ್ನೆಲ್ಲಾ ಅಗೆದು ಬಿಡುತ್ತದೆ. ಗನ್ ಗಳಿಗಾಗಿ ಹುಡುಕಾಡಿ ಬರಿಗೈಲಿ ವಾಪಸಾಗುತ್ತದೆ.
ತಂದೆಗೆ ಮಗ ಮತ್ತೆ ಪತ್ರ ಬರೆಯುತ್ತಾನೆ- ಅಪ್ಪ ಈಗ ನೀನು ಆಲೂಗಡ್ಡೆ ಬೆಳೆಯಬಹುದು. ಜೈಲಿನಲ್ಲಿದ್ದುಕೊಂಡು ನಾನು ಮಾಡಬಹುದಾದ ಸಹಾಯ ಇಷ್ಟೆ!


‍ಲೇಖಕರು avadhi

4 March, 2009

10 Comments

  1. ಬಸವರಾಜು

    ಚೆನ್ನಾಗಿದೆ, ನಮ್ ಹಾಸ್ನುದ್ ರೈತ್ರು ಅಂದ್ರೇನು? ಸುಲ್ಭಾ ಮಾಡ್ಕಬೇಡಿ…

  2. ಅಂಚೆಮನೆ ರಘು.

    ಲಕ್ಷ್ಮೀಕಾಂತ್ ಅವರಿಗೆ ಬಂದ ಎಸ್ಎಂಎಸ್ ನ ತುಂಬ ಚೆನ್ನಾಗಿದೆ.

  3. santasajoy

    buddhi iddare prapanchadalli elli bekaadaru baduka bahudu!

  4. chandrashekhar aijoor

    simply superb!

  5. Meena Jois

    Although I have read this before, I liked it now all the same. Thanks,

  6. .sombudda

    very nice sms

  7. Gavisidd Hosamani

    ಅರ್ಥಪೂರ್ಣವಾಗಿದೆ…..

  8. santhosh

    sahasamaya moju. nijakku khushikottithu.

  9. Rakshith Gowda

    Thumba chennagide!! Short & sweet

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading