ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೆಹಬೂಬ್ ಮಠದ ಕವಿತೆ ‘ಗಾಯಗೊಂಡ ಕೊರಳಿನ ಹಾಡು’

ಮೆಹಬೂಬ್ ಮಠದ

ಕೆಂಪು ದೀಪದ
ಬೀದಿಯಲ್ಲಿ
ಕನಸುಗಳ
ಮಾರಣಹೋಮ
ಬೆಚ್ಚಿದ ನಕ್ಷತ್ರಗಳು
ಮಂಡಿಯೂರಿ
ಬಿಕ್ಕುತ್ತಿವೆ
ಕತ್ತೆಕಿರುಬಗಳ
ತುಟಿಗಳಿಗೆ
ಪಾಪದ ಹೂಗಳ
ನಾಳೆಗಳ ತಿಂದ
ರಕ್ತ ಅಂಟಿದೆ
ಬಿಕರಿಯಾಗದಂತೆ
ಗೋಡೆಗಳ ಹರಕೆ
ಮಾಂಸದಂಗಡಿಯ
ಗಲ್ಲಾಪೆಟ್ಟಿಗೆಯಲ್ಲಿ
ಹೃದಯ ಒಡೆದ ಸದ್ದು
ಕಾಯುವವರ ಕೈಯಲ್ಲಿ
ದರ ಪಟ್ಟಿ ಕಂಡು
ತಲೆ ತಗ್ಗಿಸಿದೆ


ಜಗಲಿ ಮೇಲಿನ ದೀಪ
ಹಸಿವು ತಳ್ಳಿದೆ
ವಿಷ ವರ್ತುಲಕೆ
ಎಳೆ ಕೈಗಳ ತಟ್ಟೆಯಲಿ
ಕಂಬನಿ ಮೆತ್ತಿದ ರೊಟ್ಟಿ ತುಂಡು
ನಿಟ್ಟುಸಿರು ಬಿಡುವ
ವ್ಯಾನಿಟಿ ಬ್ಯಾಗಿನೊಳಗೆ
ಡೈರಿ ಮಿಲ್ಕಿನ ಜಿಗುಟು
ಔಷಧಿಯ ಕಮಟು
ಮೋಸದ ಬಾವಿಗೆ ಬಿದ್ದ
ಮನಸುಗಳ ಕಣ್ಣು
ಹುಡುಕುತ್ತಿವೆ
ಭರವಸೆಯ ಹಗ್ಗ
ಮಲ್ಲಿಗೆ ತಬ್ಬಿದ
ದಾರದಲ್ಲಿ
ರಾಖಿ ಕಂಡರೆ
ರಸ್ತೆ ಬದಿಯ
ಸೆರಗುಗಳು
ಹರಿಯುವದಿಲ್ಲ
ಚೌಕಟ್ಟಿನ ಸಂಬಂಧಗಳ
ಸಂತೆಯಲಿ
ಕೇಳಿಸುವುದೇ ಇಲ್ಲ
ಗಾಯಗೊಂಡ
ಕೊರಳಿನ
ಹಾಡು.

‍ಲೇಖಕರು Avadhi

16 February, 2021

1 Comment

  1. ಅಮರದೀಪ್. ಪಿ.ಎಸ್‌

    ಚೆನ್ನಾಗಿದೆ ಮೇಷ್ಟ್ರೇ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading