ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೃದುವಾಗು ಮೌರ್ವಿ..

ನಾಗರೇಖಾ ಗಾಂವಕರ

ಮಧುರ ಮಂಜುಳ ಗಾನ
ಎದೆಗಿಳಿಸಿದವನೇ
ಮೋಹದ ಮಜಲುಗಳು
ಧೀರ್ಘವಾಗಿವೆ.
ಮಕಮಲ್ಲಿನ ಮೃದು
ಮೈಸೋಕಿದಂತೆ
ಕೋಮಲತೆಯ ಕಂಪು
ಆವರಿಸಿದೆ ಮಂಪರುಗೈದಿದೆ.

ಮನದೊಡೆಯ ಮೌನ
ಮಾತಾಗುವುದಂತೆ
ಮಿಲನಗೊಂಡರೆ ಮನಸ್ಸು.
ಮಿಡಿತ ತುಡಿತ
ಮಿಂಚಂಚೆಯಂತೆ
ಮೇರು ಮಂದಾರವೇರಿ
ಮುಟ್ಟಿಬರಲಿ ನಿನ್ನ.

ಮಣ್ಣಿನಾಳದ ಮಹತ್ತು
ಮೇದಿನಿಯ ಮಡಿಲು
ಮೋಹ ಮಾಲೆಯ ತೊಟ್ಟು
ಮಂಟಪವೇರಲಿ
ಮನವು ಮುದಗೊಳ್ಳಲಿ
ಮೃತವು ಅಮೃತವಾಗಿ.

ಮಸೆಯುತಿದೆ ಮೋಹದ ಕತ್ತಿ
ಮಾದಕತೆ ಮತಿಗೆಡಿಸುತ್ತಿದೆ
ಮೇರುಮೋಡಗಳ
ಏರಿಳಿತ ಉಬ್ಬಸಗಳ
ಕಾಲುದಾರಿಯಲ್ಲಿ
ಮೋಹದ ಮಳೆ ಸುರಿಯಲಿ
ಮದನಾ ಹೇ ಮೋಹನಾ..
ಮಂಗಲದ ಜಾಗಟೆ ಮೊಳಗಲಿ
ಸವಿಯಲು ಸವೆಯದೆ ಏಕಮುಖ
ಪ್ರೀತಿಧಾರೆ ಹನಿಯಲಿ.

ಮಯೂಖ ಮೇಳೈಸಲಿ
ಮಂಕು ಮುಸುಕದಂತೆ
ಮನೋವಲ್ಲಭ
ಮಂದ್ರ ಮಾಯೆಯ ಮೀಗು
ಮನದೊಳಗೆ ಮಗುವಾಗು
ಮೃದುವಾಗು ಮೌರ್ವಿ

‍ಲೇಖಕರು avadhi

3 April, 2017

2 Comments

  1. Sangeeta

    ಕವಿತೆ ಚೆನ್ನಾಗಿದೆ
    ಸಂಗೀತ ರವಿರಾಜ್

  2. Sangeeta

    ಕವಿತೆ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading