ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂರು ಪುಟ್ಟ ಅನುವಾದಿತ ಕವಿತೆಗಳು

ನ್ಯಾನೋ ಸಾಕಿ, ರೂಮಿ, ಖಲೀಲ್ ಗಿಬ್ರಾನ್ ಅನುವಾದಿತ ಕವಿತೆಗಳು

ವೈ ಬಿ ಹಾಲಬಾವಿ

ಈ ಮಣ್ಣಲ್ಲೇ ಊರಿರಲಿ..


ಯಾವಾಗ ಕೆಟ್ಟ ಕತೆಗಳನ್ನು ಕೇಳುವಿಯೋ
ನಿನ್ನ ಕಿವಿಗಳನ್ನು ಸ್ವಚ್ಛಗೊಳಿಸು
ಯಾವಾಗ ಕೆಟ್ಟ ದೃಶ್ಯಗಳನ್ನು ನೋಡುವಿಯೋ
ನಿನ್ನ ಕಣ್ಣುಗಳನ್ನು ಸ್ವಚ್ಛಗೊಳಿಸು
ಯಾವಾಗ ಕೆಟ್ಟ ವಿಚಾರಗಳನ್ನು ಪಡೆಯುವೆಯೋ
ನಿನ್ನ ಮನಸ್ಸನ್ನು ಸ್ವಚ್ಛಗೊಳಿಸು
ಆದರೆ;
ಊರಿರಲಿ ನಿನ್ನ ಕಾಲುಗಳು ಈ ಮಣ್ಣಲ್ಲೇ…
ಮೂಲ: ನ್ಯಾನೋ ಸಾಕಿ

ಕಣ್ಣು..


ನೋಡು ನಿನ್ನ ಕಣ್ಣುಗಳನ್ನು
ಅವು ಚಿಕ್ಕದಾಗಿವೆ
ಆದರೆ; ಅವು ನೋಡುವ
ನೋಟ ಅಗಾಧವಾಗಿವೆ…
ಮೂಲ: ರೂಮಿ

ಕಡಲು ಮತ್ತು ದಡ..


ನಡೆಯುತ್ತಲೇ ಇದ್ದೇನೆ ಈ ದಡಗಳ ಮೇಲೆ ಎಂದೆಂದೂ
ಮರಳು ಮತ್ತು ನೊರೆಯ ನಡುವೆ
ಎತ್ತರದಲೆಗಳು ಅಳಿಸುತ್ತವೆ ನನ್ನ ಹೆಜ್ಜೆ ಗುರುತುಗಳನ್ನು
ಮತ್ತೆ ಗಾಳಿ ಅಳಿಸಿ ಹೋಗುತ್ತದೆ ನೊರೆಯನ್ನು
ಆದರೆ; ಇರುತ್ತವೆ ಕಡಲೂ ದಡವೂ ಎಂದೆಂದೂ…
ಮೂಲ: ಖಲೀಲ್ ಗಿಬ್ರಾನ್
 
 
 

‍ಲೇಖಕರು avadhi

24 June, 2014

3 Comments

  1. mmshaik

    very nice…

  2. Renuka Shripad Bada

    nice lines

  3. parashuram boner

    very nice line sir. iam very happy

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading