ಪರಾನ್ನದ ಬೇಗುದಿಯೊಳಗೆ ಕುದಿಯುತಿದೆ ಜೀವ
ಚೇತನ ಸೊಲಗಿ, ಮುಂಡರ
ಮಹಡಿ ಕಟ್ಟುವೆವು
ಚಂದದೊಂದು
ಮಹಲ್ ನಿರ್ಮಿಸುವೆವು
ನೂರಾರು ವರುಷ ಬಾಳುವಂತೆ
ಹರಸಿ ಹಾರೈಸುವೆವು
ದುರ್ದೈವವಷಾತ್ ಮಹಡಿ
ಇರುವ ಜಾಗೆಯಲ್ಲಿ
ನಮದೊಂದು ಪುಟ್ಟ ಗುಡಿಸಲಿತ್ತು
ಮೈಮರೆವಿಗೊಂದಾಸರೆಯಿತ್ತು
ಎಂಬುದು ಈ ದಿಶಾಹೀನನಿಗೆ
ನೆನಪು ಮಾತ್ರ!
ಆ ಅಂದಗೇಡಿ ಹಟ್ಟಿಗೆಲ್ಲ ಬೆಂಕಿ ಇಟ್ಟು
ಚಂದದೊಂದು ಮಹಲು ನಿರ್ಮಿಸಿದೆವು
ಎಂಬ ಆಶೋಕ್ತಿ
ಒಡಲಲ್ಲಿ ಮನೆ ಮಾಡಿದ್ದರೂ
ಈ ಅಂದಕ್ಕಾಗಿ
ನಮ್ಮ ಸೂರನ್ನೇ ಸುಟ್ಟು
ನೆಲೆಯಿಲ್ಲದ ನಾವಿಕರನ್ನಾಗಿಸಿದ್ದು
ಮಾತ್ರ ಕಳಾಹೀನ!
ಕಬ್ಬಿಣದ ಕಣಜವನ್ನೇ ಸೇರಿಸಿ
ನಮ್ಮಿರುಹ ಸೂರನ್ನೇ ಕ್ಷಯಿಸಿ
ಬಿಸಿರಕ್ತ ಮಿಶ್ರಿತ ಕಾಂಕ್ರೆಟ್ ಹಾಕಿ
ಮನೆ ಕಟ್ಟುವೆವು ನಾವ್.
ಈ ಒಣಕಲು ದೇಹ
ಮರೆ ಮಾಡುವುದಕ್ಕೊಂದು ಬಟ್ಟೆಯಿಲ್ಲ
ಇರಲಿಕ್ಕೊಂದು ಸೂರಿಲ್ಲ
ತಿನ್ನಲಿಕ್ಕೆ ತುತ್ತು ಅನ್ನವಿಲ್ಲ
ಇರುಹ ಕಸಿದ ಭೂಪರಿಂದು
ಭೂತಾನರಂತಾಗಿ
ದಾರಿ ತಪ್ಪುತ್ತಿದ್ದಾರೆ
ದಾರಿ ನಿರ್ಮಿಸಿದವರನ್ನು
ಹಮಾಲರಂತೆಯೇ ಕಂಡು!
ಪರಾನ್ನದ ಬೇಗುದಿಗೆ ಕುದಿಯುತಿದೆ ಜೀವ
ನಮಗ್ಯಾರು ಸೂರು
ನಮ್ಮ ನೇವರಿಸುವ ದಾರಿ
ನಿಮ್ಮ ಕಣ್ಣಿಗೆ
ಕಾಣುವುದು ಯಾವಾಗ!

ಸ್ವರ್ಣ ಬಿಂದುವಿನ
ದೀನ ಬಂಧುವಿನ, ಅನ್ನದಾತನ
ಹನಿ-ಹನಿ ರಕ್ತ ಬಸೆದು
ಕಟ್ಟಿದ ಕೋಟೆ ಈ ರಾಜ್ಯ
ನಿಧಾನಿಸದೆ, ವಿಧಾನ ಮಂಡಲದ
ದೊರೆಯಾದವರೇ
ಬಗೆಗುಂದಿದ ಅನ್ನದಾತ
ಬಂಧಗ್ರಂಥಿಗೊಳಗಾಗುವಂತೆ
ಆತನ ಕನಸ ಬಾಡಿಗೆ ತೆಗೆದುಕೊಂಡು
ಗೆಲುವಿನ ಹಾಲುಕ್ಕಿಸಿ
ಬಕ್ಷೀಸು ಆಚೆಗಿರಲಿ!
ಬಾಡಿಗೆಯನ್ನೂ ನೀಡದಿದ್ದರೇನು ಪ್ರಯೋಜನ
ನಿಮಗೆ ನಾವು
ಮೂಢಭಾವದ ಅನಾಮಿಕರೇ ಆಗಿರಬಹುದು
ಕಾರ್ಪಣ್ಯದ ಬೆವರ ಹನಿಯ ತುದಿಗೆ
ಬೆಂಕಿ ತಾಗಿ
ಸಹನೆಯ ಓರೆಗೋಲು ದಾಟೀತು ಜೋಕೆ
ಮೆರೆವ ಮೇಕೆಗಳೆ
ಗೋಣು ತೆಗೆಯುವೆವು.
ನಮ್ಮನೆ ಖಜಾನೆ ಬಿಡೆದಿರೆ ನೀವು
ಎದ್ದು ಬನ್ನಿ ಬಿಳಿಬಟ್ಟೆಧಾರಿಗಳೆ
ನೆಲಗೆಬರಿ ಅಂಟಿಕೊಂಡ ಧೂಳು ಜಾಡಿಸಿ
ಶ್ವೇತ ಕನಸುಗಳ ಸಾಹುಕಾರರು ನಾವು
ಅರಿತು ಅವಕೆ ರಂಗು ನೀಡಿ
ಕೆಸರೆರಚಿ ಕಳಾಹೀನರಾಗಬೇಡಿ!






chennaagide..dvani