ಅವಧಿಯ ಓದುಗ ಪತ್ರಕರ್ತ ರವಿ ಅಜ್ಜೀಪುರ ‘ಒಂದು ಸಣ್ಣ ಮುನಿಸು ಅವಳೆಡೆಗೆ’ ಎನ್ನುವ ನಾಲ್ಕು ಪದ ಕೊಟ್ಟು ‘ಇದು ಕವಿತೆಯಾಗಿ ಬೆಳೆದೀತೆ? ನಿಮ್ಮ ಮನಸಿನೊಳಗೆ’ ಎಂದು ಕೇಳಿದ್ದರು.
‘ಆಗದೆ ಏನು’ ಎಂದು ಕವಿತೆ ಮಾಡಿದ ಇಬ್ಬರು ಇಲ್ಲಿದ್ದಾರೆ..
ಒಂದು ಸಣ್ಣಮುನಿಸು ಅವಳೆಡೆಗೆ
ನಾನಿನ್ನೂ ಕೊಡುವುದಿತ್ತು ತುತ್ತು ಬೇಡುವುದಿತ್ತು ಅವಳ ಮುತ್ತು
ಬಣ್ಣದ ನೆರಿಗೆಯ ಫ್ರಾಕಿನ ನೆರಳ ಕಾಂತಿಯಲಿ ಜೀನ್ಸ್ ಕಾಯುತ್ತಿತ್ತು
ಕಾಲ ಹಾಲಕೆನೆಯಂತೆ ಉಕ್ಕಿಯೇ ಹೋಯ್ತು
ವಯಸ ಮಾಯಕದ ತೆರೆಗೆ ಅಡ್ಡಹಾಕಲೇ
ನನ್ನ ಹರೆಯದ ಕನಸುಗಳ ಗುಡ್ಡೆ ಹಾಕಲೇ
ಹರಸಬೇಕಿದೆ ಹೆಗಲಾಗಬೇಕಿದೆ ಕನಸುಗಳಿಗೆ
ಮಗಳಿಗೆ ಮಗಳಾಗಿ ಕಂಬನಿಯ ಮಿನುಗಿಸಬೇಕಿದೆ
ಜೊತೆಗೆ ಕಾಲನೆದುರು ನನ್ನ ಕಾಲೂರಿಸಿದ
ಅವಳೆಡೆಗೊಂದಿಷ್ಟು ಮುನಿಸಿದೆ..
-ಸುಧಾ ಚಿದಾನಂದಗೌಡ
ಒಂದು ಸಣ್ಣ ಮುನಿಸು ಅವಳೆಡೆಗೆ
ಮೋಡ ಕಟ್ಟಿಯೂ ಮಳೆ ಸುರಿಸದ ಜಿಡ್ದುತನಕ್ಕೆ,
ಮಳೆ ಸುರಿಸಿಯೂ ಕೊಚ್ಚಿ ನೊಣೆದ ಕೋಪಕ್ಕೆ
ನೊಣೆದರೂ, ಕೊಡಲಿ ಬೀಸಿದ ಪಾಪಿಗಳ
ನೊಣೆಯದೆ , ಅಮಾಯಕರ ನುಂಗಿದ್ದಕ್ಕೆ,
ಅವಳನ್ನೇ ನುಂಗುವ ರಕ್ಕಸ ಮಕ್ಕಳ
ಮೇಲೆ ಇನಿತೂಕರುಣೆ ತೋರದಿದ್ದಕ್ಕೆ ,
ಸಹನೆ ಮಂತ್ರದಲಿ ತನ್ನನ್ನೇ ಬಲಿಯಾಗಿಸಿಕೊಳ್ಳುತ್ತಿರುವುದಕ್ಕೆ
ಒಂದು ಸಣ್ಣ ಮುನಿಸು ಅವಳೆಡೆಗೆ
– ಎಸ್ .ಪಿ. ವಿಜಯಲಕ್ಷ್ಮಿ





oh… thanq avadhi..
Sudhakka lovely poem.tumba ishtavaaytu.
“chandada spardhe” ittu , nanninda ‘that antha’ kavithe huttisida ” Ravi avarige,
adannu preetiyinda prakatisida ‘Avadhi’ ge vandanegalu…